ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಹಬ್ಬದ ಸಡಗರದಲ್ಲಿದ್ದ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ದುರಂತವೊಂದು ನಡೆದಿದೆ. ಗಣಪತಿಯ ದರುಶನ ಪಡೆಯಲು ಭಕ್ತ ಸಾಗರವೇ ನೆರೆದಿದ್ದ ಸಂದರ್ಭದಲ್ಲಿ, ಪೆಂಡಾಲ್ ಒಂದರ ಬಳಿ ವಿದ್ಯುತ್ ಶಾಕ್ ತಗುಲಿ ಎಂಟು ವರ್ಷದ ಚಿಕ್ಕ ಬಾಲಕಿ ಸೇರಿದಂತೆ ಇಬ್ಬರು ಭಕ್ತರು ಜೀವ ಕಳೆದುಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ.
ಮುಂಜಾನೆ ನಡೆದ ದುರಂತ
ಮುಂಬೈನ ಕಾಲಾಚೌಕಿ ಪ್ರದೇಶದ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ‘ಕಾಲಾಚೌಕಿ ವಿಭಾಗ್ ಸಾರ್ವಜನಿಕ ಉತ್ಸವ ಮಂಡಳಿ’ಯ ಪೆಂಡಾಲ್ ಬಳಿ ಇಂದು (ಭಾನುವಾರ) ಮುಂಜಾನೆ ಸುಮಾರು 2:20 ರ ವೇಳೆಗೆ ಈ ಘಟನೆ ಸಂಭವಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಇಡೀ ಲಾಲ್‌ಬಾಗ್ ಪ್ರದೇಶವು ತಡರಾತ್ರಿಯಾದರೂ ಭಕ್ತರಿಂದ ಕಿಕ್ಕಿರಿದು ತುಂಬಿತ್ತು.
ಇದನ್ನೂ ಓದಿ:
ಕಾರಣ ಇನ್ನೂ ನಿಗೂಢ
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದ ಜಾಗದಲ್ಲಿ ಹೇಗೆ ಶಾರ್ಟ್ ಸರ್ಕ್ಯೂಟ್ ಆಯಿತು ಮತ್ತು ಈ ದುರಂತಕ್ಕೆ ನಿಜವಾದ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮೃತರ ಮತ್ತು ಗಾಯಗೊಂಡವರ ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹಬ್ಬದ ಸಂಭ್ರಮದ ನಡುವೆಯೇ ಈ ಘಟನೆ ಇಡೀ ಮುಂಬೈ ಜನತೆಯನ್ನು ದಿಗ್ಭ್ರಮೆಗೊಳಿಸಿದೆ.



