ಈ ಮೂರು ದಿನ 24 ಗಂಟೆಯೂ ಆಯೋಧ್ಯೆ ರಾಮ ಮಂದಿರ ತೆರೆಯಲು ಸಿಎಂ ಯೋಗಿ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯೋಧ್ಯೆ ರಾಮ ಮಂದಿರದತ್ತ ಭಕ್ತರು ಆಗಮಿಸುತ್ತಿದ್ದು, ಬಲರಾಮನ ನೋಡಲು ಕಾತುರದಿಂದ ಆಗಮಿಸುತ್ತಿದ್ದಾರೆ. ಇದೀಗ ಶಾಲಾ ಕಾಲೇಜುಗಳು ಬೇಸಿಗೆ ರಜೆಯತ್ತ ದಾಪುಗಾಲಿಡುತ್ತಿದೆ. ಹೀಗಾಗಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಸೂಚನೆ ನೀಡಿದ್ದಾರೆ. ದಿನದ 24 ಗಂಟೆ ರಾಮ ಮಂದಿರ ತೆರೆಯಲು ಸೂಚನೆ ನೀಡಿದ್ದಾರೆ. ನವರಾತ್ರಿಯ ಅಂತಿಮ ಮೂರು ದಿನದಲ್ಲಿ 24 ಗಂಟೆಯೂ ರಾಮ ಮಂದಿರ ಭಕ್ತರ ದರುಶನಕ್ಕೆ ಅವಕಾಶ ನೀಡಲು ಸೂಚಿಸಿದ್ದಾರೆ.

ನವರಾತ್ರಿಯ ಅಷ್ಠಮಿ, ನವಮಿ ಹಾಗೂ ದಶಮಿಯ ಮೂರು ದಿನ 24 ಗಂಟೆ ರಾಮ ಮಂದಿರ ಭಕ್ತರಿಗೆ ದರುಶನ ನೀಡಲಿದೆ. ಈ ಮೂರು ದಿನ ವಿಶೇಷ ಪೂಜೆಗಳು ನಡೆಯಲಿದೆ.
24 ಗಂಟೆ ಭಕ್ತರು ರಾಮ ಮಂದಿರ ದರುಶನ ಪಡೆಯಲು ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಜೊತೆಗೆ ಭಕ್ತರಿಗೆ ಎಲೆಕ್ಟ್ರಿಕ್ ಬಸ್ ಸೇವೆ ನೀಡಲು ಸೂಚನೆ ನೀಡಲಾಗಿದೆ.

ದೇಗುಲದಲ್ಲಿ ಶುಚಿತ್ವ ಕಾಪಾಡಲು ವಿಶೇಷ ಕಾಳಜಿ ವಹಿಸಬೇಕು. ಬೇಸಿಗೆ ಉರಿ ಹೆಚ್ಚಾಗಿರುವ ಕಾರಣ ಭಕ್ತರಿಗೆ ನೀರಿನ ವ್ಯವಸ್ಥೆ ಮಾಡಬೇಕು. ಭಕ್ತರು ಸರದಿ ಸಾಲಿನಲ್ಲಿ ಗರಿಷ್ಠ 2.5 ಕಿಲೋಮೀಟರ್‌ಗಿಂತ ಹೆಚ್ಚು ಇರಬಾರದು ಎಂದು ಯೋಗಿ ಸೂಚಿಸಿದ್ದಾರೆ.

ಇದೇ ವೇಳೆ ರಾಮ ನವಮಿ ಆಚರಣೆಗೆ ತಯಾರಿ ಕುರಿತು ಯೋಗಿ ಆದಿತ್ಯನಾಥ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಚುನಾವಣೆ ವೇಳೆ ರಾಮ ನವಮಿ ಆಗಮಿಸುತ್ತಿರುವ ಕಾರಣ ಯಾವುದೇ ಸಮಸ್ಯೆಯಾಗದಂತೆ ತಯಾರಿ ಮಾಡಲು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!