ದಿನಭವಿಷ್ಯ: ನಿಮ್ಮ ಸಿಡುಕಿನ ನಡೆಯಿಂದ ಆಪ್ತರ  ಮನಸ್ಸು ನೋಯಿಸುವಿರಿ!

ಮೇಷ
ಒತ್ತಡ, ಉದ್ವಿಗ್ನತೆ, ಅಸಹನೆ ನಿಮ್ಮನ್ನು ಕಾಡುತ್ತದೆ. ಪ್ರೀತಿಪಾತ್ರರ ಜತೆಗಿನ ಮಾತುಕತೆ ಇವೆಲ್ಲವನ್ನು ಮರೆಸುತ್ತದೆ. ಧನವ್ಯಯ ಹೆಚ್ಚುವುದು.

ವೃಷಭ
ಸಣ್ಣ ಗಾಯ ಅಥವಾ ತುಸು ಅನಾರೋಗ್ಯ ಕಾಡಬಹುದು. ಹರಿತ ವಸ್ತು, ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ. ಕೌಟುಂಬಿಕ ಒತ್ತಡ ಹೆಚ್ಚು.

ಮಿಥುನ
ನಿಮ್ಮ ಸಿಡುಕಿನ ನಡೆಯಿಂದ ಆಪ್ತರ  ಮನಸ್ಸು ನೋಯಿಸುವಿರಿ. ನಿಮ್ಮ  ಸಮಸ್ಯೆಗಳಿಗೆ ಇತರರನ್ನು ದೂರುವುದನ್ನು ಬಿಟ್ಟುಬಿಡಿ.

ಕಟಕ
ಪರಮಾಪ್ತರ ಸಂಗದಲ್ಲಿ ಸಂತೋಷ ಪಡೆಯುವಿರಿ. ಇತರ  ಒತ್ತಡಗಳನ್ನು ಅವರು ಮರೆಸುತ್ತಾರೆ. ಕೌಟುಂಬಿಕ ಕಟ್ಟುಪಾಡು ಮರೆಯದಿರಿ.

ಸಿಂಹ
ಭಾವನಾತ್ಮಕ ಏರುಪೇರು. ಒಂದು ಕ್ಷಣ ಅತಿಯಾದ ಸಂತೋಷ. ಮರುಕ್ಷಣ ಬೇಸರ ಕಾಡಬಹುದು.  ಎಲ್ಲರ ಜತೆ ಸೌಹಾರ್ದ ಸಂಬಂಧ ಬೆಳೆಸಲು ಆದ್ಯತೆ ಕೊಡಿ.

ಕನ್ಯಾ
ನಿಮ್ಮ ಕಾರ್ಯವೈಖರಿ ನಿಮಗೆ ಶ್ಲಾಘನೆ  ತರುವುದು. ಸವಾಲನ್ನು ಸಮರ್ಥವಾಗಿ ಎದುರಿಸುವಿರಿ.  ಕೌಟುಂಬಿಕ ಕ್ಲೇಶ ಪರಿಹಾರ, ನೆಮ್ಮದಿ.

ತುಲಾ
ನೀವು ಕೈಗೊಳ್ಳುವ ಕಾರ್ಯಕ್ಕೆ ಇತರರ  ಬೆಂಬಲದ ಅಗತ್ಯವಿದೆ. ಅನುನಯಿಸಿ ಬೆಂಬಲ  ಪಡೆಯಿರಿ. ಅವರಿಗೆ ಅಸಮಾಧಾನ ಸೃಷ್ಟಿಸಬೇಡಿ.

ವೃಶ್ಚಿಕ
ಏಕತಾನತೆಯ ಕೆಲಸದಿಂದ ಉತ್ಸಾಹ ಕುಂದಬಹುದು.  ಜೀವನದಲ್ಲಿ ವೈವಿಧ್ಯತೆ ತುಂಬಲು ಪ್ರಯತ್ನಿಸಿ. ಆತ್ಮೀಯರ ಸಹಕಾರ ಪಡೆಯಿರಿ.

ಧನು
ಇತರರ ಕೆಟ್ಟ ಗುಣವನ್ನೂ  ಕ್ಷಮಿಸುವ , ಮರೆಯುವ ಒಳ್ಳೆತನ ತೋರುವಿರಿ. ಆದರೆ ಅದನ್ನು ಅವರು ದುರುಪಯೋಗ ಮಾಡದಂತೆ ನೋಡಿಕೊಳ್ಳಿ.

ಮಕರ
ಸಂಘಟಿತ ಕಾರ್ಯದಿಂದ ಹೆಚ್ಚು ಯಶಸ್ಸು ಪಡೆಯುವಿರಿ. ಹಾಗಾಗಿ ನಾನೊಬ್ಬನೇ ಎಲ್ಲವನ್ನೂ ಮಾಡಬಲ್ಲೆ  ಎಂಬ ಧೋರಣೆ ತ್ಯಜಿಸಿ. ಸಹಕಾರವಿರಲಿ.

ಕುಂಭ
ಯಶಸ್ಸು, ಹಣ, ಕೀರ್ತಿ ಎಲ್ಲವೂ ಇಂದು ನಿಮ್ಮೆಡೆಗೆ ಉದಾರ ದೃಷ್ಟಿ ತೋರಲಿವೆ. ಅನಿರೀಕ್ಷಿತ ಲಾಭ ಉಂಟಾಗಲಿದೆ. ಕಾರ್ಯದಲ್ಲಿ ಇದ್ದ ಅಡಚಣೆ ನಿವಾರಣೆ.

ಮೀನ
ಸಮಯ ಮೀರುವ ಮುನ್ನ ಅಗತ್ಯ ಕಾರ್ಯ ಪೂರೈಸಿಕೊಳ್ಳಿ.  ಸಣ್ಣ ವಿಷಯಗಳನ್ನೂ ಕಡೆಗಣಿಸಬೇಡಿ. ಕೌಟುಂಬಿಕ ಬೇಡಿಕೆ ಈಡೇರಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!