Saturday, December 9, 2023

Latest Posts

ಸಿಎಂ ಝೀರೋ ಟ್ರಾಫಿಕ್ ಸಂಚಾರ: ಸಾರ್ವಜನಿಕರಿಗೆ ಉರಿ ಬಿಸಿಲ ಶಿಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ನಿಯಮ ಕೈಬಿಡುತ್ತೇನೆ ಎಂದು ಹೇಳಿದ್ದರು.

ಜನಸಾಮಾನ್ಯರು ಸಿದ್ದರಾಮಯ್ಯ ನಡೆಗೆ ಸಂತಸ ವ್ಯಕ್ತಪಡಿಸಿದ್ದರು, ಸಿಂಪಲ್ ಸಿದ್ದರಾಮಯ್ಯ ಎಂಬೆಲ್ಲಾ ಹೆಸರುಗಳು ಫೇಮಸ್ ಕೂಡ ಆಗಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ತೆರಳಿದ್ದು, ತಾವು ಹೇಳಿದ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ಟ್ರಾಫಿಕ್ ಮುಕ್ತವಾಗಿ ಸಂಚರಿಸುವ ಸಲುವಾಗಿ ನಾಗರಿಕರನ್ನು ಉರಿ ಬಿಸಿಲಿನಲ್ಲಿ ನಿಲ್ಲುವಂತೆ ಸೂಚನೆ ನೀಡಲಾಗಿತ್ತು. ಸುಡು ಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿ ಬೆವರಿಳಿಸುತ್ತಾ ಪ್ರಯಾಣಿಕರು 10 ನಿಮಿಷ ಕಾದಿದ್ದಾರೆ.

ಮಧ್ಯಾಹ್ನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಮನೆಗೆ ಊಟಕ್ಕೆ ತೆರಳುತ್ತಿದ್ದ ಸಿಎಂ ಝೀರೋ ಟ್ರಾಫಿಕ್ ರಸ್ತೆ ಬಳಸಿದರು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!