ಹೊಸದಿಗಂತ ವರದಿ, ಕಲಬುರಗಿ:
ಕಲಬುರಗಿ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುವ ವೇಳೆಯೆ ಸೋಮವಾರ ಬೆಳಿಗ್ಗೆ ನಗರದ ಕೆಲವೆಡೆ ಪೇ ಸಿಎಂ ಪೋಸ್ಟರಗಳು ಕಂಡು ಬಂದಿವೆ.
ಕ್ಯೂಆರ್ ಕೋಡ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಇರುವ ಪೇ ಸಿಎಂ ಪೋಸ್ಟರ್ಗಳನ್ನು ಹಲವೆಡೆ ಕಾಂಗ್ರೆಸ್ ಕಾಯ೯ಕತ೯ರು ಅಂಟಿಸಿದ್ದಾರೆ.
ನಗರದ ಸಂಗಮೇಶ್ವರ ಕಾಲೊನಿ, ಟ್ಯಾಂಕ್ ಬಂಡ್ ರಸ್ತೆ ಸೇರಿ ಅನೇಕ ಕಡೆ ಗೋಡೆಗಳ ಮೇಲೆ ಪೇಸಿ ಎಂ ಪೋಸ್ಟ್ರಗಳನ್ನು ಅಂಟಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಪೇ ಸಿಎಂ ಪೋಸ್ಟರ್ಗಳು ಬೆಂಗಳೂರಿನಲ್ಲಿ ಗೋಡೆಗಳ ಮೇಲೆ ಅಂಟಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆದಿತ್ತು.
ಇತ್ತೀಚೆಗೆ ಚಿತ್ತಾಪುರ ಪಟ್ಟಣದಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ಕಾರ್ಯಕರ್ತರು ಪೇ ಸಿಎಂ ಪೋಸ್ಟರ್ ಅಂಟಿಸಿದ್ದಾರೆ. ನಂತರ ಪಾಲಿಕೆ ಅಧಿಕಾರಿಗಳು ಪೇ ಸಿಎಂ ಪೋಸ್ಟರ್, ಗಳನ್ನು ತೆರವುಗೊಳಿಸಿದ್ದಾರೆ.