ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ನೋದ ಅಲಿಗಂಜ್‌ನ ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 15 ಜನರು ಮೃತಪಟ್ಟಿದ್ದು, ಇದೀಗ ಕಟ್ಟಡವನ್ನು ತೆರವುಗೊಳಿಸಲು ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಸಮಯ ಕೊಡುವುದಿಲ್ಲ ಈಗಲೇ ಈ ಕಟ್ಟಡವನ್ನು ತೆರವುಗೊಳಿಸಿ. ನೀವು ಮಾಡಿಲ್ಲ ಎಂದಾದರೆ ನಾವೇ ಕಟ್ಟಡವನ್ನು ನೆಲಸಮ ಮಾಡುತ್ತೇವೆ ಎಂದು ಮಾಲೀಕರಿಗೆ ಲಕ್ನೀ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಈ ಜಾಗವನ್ನು ಮೊದಲು 1980ರಲ್ಲಿ ವಿಜಯ್ ಕುಮಾರ್ ಅವರಿಗೆ ನೀಡಲಾಗಿತ್ತು. 2005ರಲ್ಲಿ ಇದು ಅವರ ಮತ್ತು ಅವರ ಪತ್ನಿಯ ಹೆಸರಿಗೆ ನೋಂದಣಿಯಾಗಿತ್ತು. ನಂತರ, 2013ರಲ್ಲಿ ಅವರು ಇದನ್ನು ವೀರೇಂದ್ರ ಮತ್ತು ಸುರೇಂದ್ರ ಶುಕ್ಲಾ ಅವರಿಗೆ ಮಾರಾಟ ಮಾಡಿ, 2014ರಲ್ಲಿ ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು.
2014ರಲ್ಲಿ ಸುಮಾರು 1,992 ಚದರ ಅಡಿಯ ಈ ಕಟ್ಟಡಕ್ಕೆ ಮನೆ ಕಟ್ಟಲು ಸ್ವಯಂ ಪ್ರಮಾಣೀಕರಣ ಯೋಜನೆಯಡಿ ಅಧಿಕೃತ ಅನುಮೋದನೆ ಸಿಕ್ಕಿತ್ತು. 2016ರಲ್ಲಿ ಈ ಕಟ್ಟಡವು ಅನಧಿಕೃತ ನಿರ್ಮಾಣ ಎಂಬ ಆರೋಪ ಎದುರಿಸಿತ್ತು. ಇದರಿಂದಾಗಿ ಕಟ್ಟಡ ತೆರವಿಗೆ ಆದೇಶ ನೀಡಲಾಗಿತ್ತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಆದರೆ, ಕೇವಲ ಎರಡು ತಿಂಗಳ ಒಳಗೆ ಕಟ್ಟಡ ತೆರವಿಗಾಗಿ ನೀಡಿದ್ದ ಆದೇಶವನ್ನು ರದ್ದುಗೊಳಿಸಲಾಗಿತ್ತು.
ಅಲಿಗಂಜ್‌ನಲ್ಲಿ ವಿದ್ಯಾರ್ಥಿಗಳು ಕೋಚಿಂಗ್ ತೆಗೆದುಕೊಳ್ಳಲು ಬಂದಿದ್ದರು. ಈ ಕಟ್ಟಡದ ನೆಲಮಹಡಿಯಲ್ಲಿ ಪ್ರಾಣಿಗಳ ಮಾರಾಟ ಅಂಗಡಿ ಇತ್ತು. ಇಲ್ಲಿ ಆರಂಭವಾದ ಬೆಂಕಿ ಎಲ್ಲೆಡೆ ಹಬ್ಬಿತ್ತು. ಇದರಿಂದಾಗಿ 4 ಮಂದಿ ಗಾಯಗೊಂಡಿದ್ದು, ಆ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ.



