ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ಬಾಸ್ ಸೀಸನ್ 9ರ ಗ್ರಾಂಡ್ ಫಿನಾಲೆ ಯಲ್ಲಿ ಕರಾವಳಿಯ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ತುಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದ ರೂಪೇಶ್ ಶೆಟ್ಟಿ ಆರ್ಜೆ ಆಗಿ ಕೂಡಾ ಫೇಮಸ್ ಆಗಿದ್ದರು. ಬಿಗ್ ಬಾಸ್ ಒಟಿಟಿ ಅಲ್ಲೂ ಕೊನೆ ತನಕ ಬಂದು ಗೆದ್ದು, ಬಳಿಕ ಅಲ್ಲಿಂದ ಟಿವಿ ಬಿಗ್ಬಾಸ್ ನತ್ತ ಸಾಗಿ ಅಂತಿಮ ಕ್ಷಣ ಗೆದ್ದು ಸಂಭ್ರಮಿಸಿದ್ದಾರೆ.
ರಾಕೇಶ್ ಅಡಿಗ ರನ್ನರ್ ಆಪ್ ಆಗಿದ್ದು, ಮೂರನೇ ಸ್ಥಾನ ದೀಪಿಕಾ ದಾಸ್ ಪಡೆದುಕೊಂಡಿದ್ದಾರೆ. ಈ ಬಾರಿ ‘ಬಿಗ್ ಬಾಸ್ ಕನ್ನಡ’ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿ ದಕ್ಕಿದೆ.