September 22, 2026
Tuesday, September 22, 2026
spot_img

ನನ್ನ ಜತೆ ಡಿನ್ನರ್‌ಗೆ ಬಂದಿದೆ ʼಜಿರಳೆ ಮರಿʼ : JW Marriott ಬಗ್ಗೆ ವ್ಯಂಗ್ಯವಾಗಿ ಪೋಸ್ಟ್‌ ಮಾಡಿ ಡಾ. ಅಶೋಕ್‌ ಸೇಠ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫೈವ್‌ ಸ್ಟಾರ್‌ ಫೀಲಿಂಗ್‌, ಫೈವ್‌ ಸ್ಟಾರ್‌ ಆಂಬಿಯನ್ಸ್‌, ಫೈವ್‌ ಸ್ಟಾರ್‌ ಹೈಜಿನ್‌ ಹಾಗೂ ಫೈವ್‌ ಸ್ಟಾರ್‌ ಊಟಕ್ಕಾಗಿ ಜನ JW Marriott ಹೊಟೇಲ್‌ಗೆ ಹೋಗುತ್ತಾರೆ. ಆದರೆ ಊಟದ ಮಧ್ಯದಲ್ಲಿ ಜಿರಳೆ ಮರಿಯನ್ನು ನನ್ನ ಜತೆ ಡಿನ್ನರ್‌ಗೆ ಆಗಮಿಸಿದೆ ಎಂದು ಹೃದ್ರೋಗ ತಜ್ಞ ಮತ್ತು ಫೋರ್ಟಿಸ್‌ ಹೆಲ್ತ್‌ಕೇರ್‌ನ ಅಧ್ಯಕ್ಷ ಡಾ. ಅಶೋಕ್‌ ಸೇಠ್‌ ವ್ಯಂಗ್ಯವಾಡಿದ್ದಾರೆ.

ದೇಶದ ಪ್ರಮುಖ ಐಷಾರಾಮಿ ಹೊಟೇಲ್‌ನ ಲ್ಲಿಯೂ ಹೈಜಿನ್‌ ಸಮಸ್ಯೆ ಇರುವ ವಿಷಯ ಇದೀಗ ಮುನ್ನೆಲೆಗೆ ಬಂದಿದೆ. ಭಾನುವಾರ ಸಂಜೆ ಡಿನ್ನರ್‌ಗೆಂದು ಹೋಗಿದ್ದ ವೇಳೆ ಟೇಬಲ್‌ ಮೇಲಿದ್ದ ತಟ್ಟೆ ಮೇಲೆ ಜಿರಳೆ ಮರಿಯೊಂದು ಓಡಾಡಿದ್ದನ್ನು ಗಮನಿಸಿದ್ದಾರೆ. ತಕ್ಷಣವೇ ತಮ್ಮ ಫೋನ್‌ ತೆಗೆದು ಇದನ್ನು ಕ್ಯಾಪ್ಷರ್‌ ಮಾಡಿದ್ದು, ನಮ್ಮ ಜತೆ ಊಟ ಮಾಡೋದಕ್ಕೆ ಈ ಪುಟಾಣಿ ಜಿರಳೆ ಬಂದಿದೆ. ಜೆ ಡಬ್ಲೂ ಮ್ಯಾರಿಯಟ್‌ನ ರೊಮಾನೊ ರೆಸ್ಟೋರೆಂಟ್‌ನಲ್ಲಿ ಎಂಥಾ ಆತಿಥ್ಯ! ಸಂಡೇ ನೈಟ್‌ ಅಂದ್ರೆ ಹೀಗಿರಬೇಕು ಎಂದು ತಮಾಷೆ ಹಾಗೂ ವ್ಯಂಗ್ಯವಾಗಿ ಪೋಸ್ಟ್‌ ಮಾಡಿದ್ದಾರೆ.

ನಾನು ಎಷ್ಟು ಪ್ರೀತಿಯಿಂದ ಹೇಳಿದ್ರೂ ಜಿರಳೆಗೆ ಹೋಗೋಕೆ ಮನಸೇ ಆಗಲಿಲ್ಲ. ಅದಕ್ಕೆ ಪಾಸ್ತಾ ಇಷ್ಟ ಆಗಿಲ್ಲ ಎನಿಸುತ್ತದೆ, ಪಿಝಾ ಬೇಕಿತ್ತೇನೋ. ಜಿರಳಿಯ ಕಂಪನಿ ನೋಡಿ ನನ್ನ ಹಸಿವೆಲ್ಲಾ ಮಾಯವಾಯ್ತು. ನಾನು ಎದ್ದು ಹೋದೆ ಆದರೆ ಜಿರಳೆಮರಿ ಅಲ್ಲೇ ಎಂಜಾಯ್‌ ಮಾಡಿತು ಎಂದು ಪೋಸ್ಟ್‌ ಮಾಡಿದ್ದಾರೆ. ಇದರ ಜತೆಗೆ ಅದೃಷ್ಟವಶಾತ್‌ ನಾವು ಆಹಾರ ಸುರಕ್ಷತಾ ಆಯುಕ್ತ ತುಕಾರಾಮ್‌ ಮುಂದೆ ಅವರ ಪ್ರದೇಶದಲ್ಲಿದ್ದೀವಿ. ನನ್ನ ಟ್ವೀಟ್‌ ಅವರನ್ನು ತಲುಪಿದಲ್ಲಿ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ನಮ್ಮ ಮೇಜಿನ ಮೇಲೆ ಒಂದು ಜಿರಳೆ ಇದೆ ಅಂದ್ರೆ ಅಡುಗೆ ಮನೆಯಲ್ಲಿ ಇರೋದಿಲ್ವಾ? ಇಂಥ ದೊಡ್ಡ ಹೊಟೇಲ್‌ನಲ್ಲಿ ಈ ರೀತಿ ಲೋಪ ಹೇಗೆ? ಇದು ದೇಶಕ್ಕೆ ಮುಜುಗರವಾಗುವ ವಿಷಯ ಎಂದು ಹೇಳಿದ್ದಾರೆ. ಈ ಬಗ್ಗೆ ಹೊಟೇಲ್‌ ಯಾವುದೇ ಮಾಹಿತಿಯನ್ನು ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !