ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಕ್ರೋಚ್ ಜನತಾ ಪಾರ್ಟಿ ಎಂಬ ಡಿಜಿಟಲ್ ಚಳುವಳಿಯ ಸಾಮಾಜಿಕ ಜಾಲತಾಣ ಖಾತೆ ನಿರ್ಬಂಧಗೊಂಡ ಬಳಿಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ.
ಕೇಂದ್ರ ಸರ್ಕಾರದ ಕ್ರಮವನ್ನು ಕೇರಳದ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್ ತೀವ್ರವಾಗಿ ಟೀಕಿಸಿದ್ದು, ಇದು ಯುವಜನರ ಧ್ವನಿಯನ್ನು ಮಣಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಬಿಜೆಪಿ ಏಕೆ ಭಯಪಡುತ್ತಿದೆ?
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ನಿರುದ್ಯೋಗ, ಅಸಮಾನತೆ ಮತ್ತು ರಾಜಕೀಯ ನಿರಾಸೆಯಿಂದ ಬೇಸತ್ತಿರುವ ಯುವಕರು ಈ ಅಭಿಯಾನದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಅಸಹಿಷ್ಣುತೆಯ ನಡೆ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ಯುವಕರ ನೇತೃತ್ವದ ಅಭಿಯಾನವೊಂದನ್ನು ಸಂಸ್ಥೆಗಳ ಮೂಲಕ ತಡೆಯುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧ ಎಂದು ಪಿಣರಾಯಿ ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮವನ್ನು ಎಲ್ಲ ಪ್ರಜಾಪ್ರಭುತ್ವವಾದಿಗಳು ಖಂಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ:
ಬಿಜೆಪಿ ಕೌಂಟರ್
ಇನ್ನೊಂದೆಡೆ ಬಿಜೆಪಿ ಈ ಅಭಿಯಾನವನ್ನು ವಿದೇಶಿ ಪ್ರಭಾವದ ರಾಜಕೀಯ ಕಾರ್ಯಾಚರಣೆ ಎಂದು ಆರೋಪಿಸಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಂಚು ರೂಪಿಸಲಾಗಿದೆ ಎಂಬ ಮಾತನ್ನೂ ಬಿಜೆಪಿ ನಾಯಕರು ಮುಂದಿಟ್ಟಿದ್ದಾರೆ.
ಮತ್ತೆ ಪ್ರತ್ಯಕ್ಷವಾದ ಹೊಸ ಖಾತೆ
ಮೂಲ ಖಾತೆ ನಿರ್ಬಂಧವಾದ ಕೆಲವೇ ಹೊತ್ತಿನಲ್ಲಿ “Cockroach is Back” ಹೆಸರಿನ ಹೊಸ ಖಾತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. “Cockroaches Don’t Die” ಎಂಬ ಟ್ಯಾಗ್‌ಲೈನ್‌ನೊಂದಿಗೆ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಈ ಚಳುವಳಿಗೆ ಕೆಲವು ಯುವ ಶಾಸಕರೂ ಬೆಂಬಲ ಸೂಚಿಸಿದ್ದಾರೆ.



