ಹಲ್ಲಿನ ಸಮಸ್ಯೆಗೆ ತೆಂಗಿನೆಣ್ಣೆ ಪರಿಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರಿಗೆ ಎಲೆ ಅಡಿಕೆ(ಕವಳ), ಇನ್ನುಕೆಲವರಿಗೆ ಜರ್ದಾ, ಪಾನ್…ಹೀಗೆ ಹಲವು ‘ಹವ್ಯಾಸ’ಗಳಿರುತ್ತವೆ. ಇದರಿಂದಾಗಿ ಹಲ್ಲುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುತ್ತದೆ. ಹಲ್ಲಿನ ಬುಡದಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಪ್ಯಾಚಸ್ ಉಂಟಾಗುವುದು, ಹಲ್ಲು ಸಂಧಿಗಳಲ್ಲಿ ನೋವು ಬರುವುದು, ಹಲ್ಲಿನ ಸಮಸ್ಯೆಗಳು ಕಾಡುವುದು ಹೀಗೆ ನಾನಾ ತರದ ತೊಂದರೆಗಳಾಗುತ್ತದೆ. ನಾವು ಆಸ್ಪತ್ರೆಯ ಅತಿಥಿಗಳಾಗುತ್ತೇವೆ. ಇವುಗಳಿಂದ ಮುಕ್ತಿ ಪಡೆಯಲು ಕೆಲವು ಸುಲಭ ಉಪಾಯಗಳಿವೆ.

ಶುದ್ಧ ತೆಂಗಿನೆಣ್ಣೆಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ…ಅಚ್ಚರಿಯೇ…? ನಂಬಲೇಬೇಕು. ಯೆಸ್, ಬೆಳಗ್ಗೆ ಎದ್ದ ತಕ್ಷಣ ಎರಡು ಟೇಬಲ್ ಸ್ಪೂನ್ ಶುದ್ಧ ತೆಂಗಿನೆಣ್ಣೆಯನ್ನು ಬಾಯಿಗೆ ಹಾಕಿ ಗಾಗಲಿಂಗ್ ಮಾಡುವುದರಿಂದ ನಿಮ್ಮ ಹಲ್ಲುಗಳ ಸಮಸ್ಯೆ ದೂರವಾಗಿ ಆರೋಗ್ಯವಂತರಾಗುತ್ತೀರಿ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಈ ಕ್ರಿಯೆಯನ್ನು ಮುಂದುವರಿಸಿ ಹದ ಬಿಸಿನೀರಿನಿಂದ ಚೆನ್ನಾಗಿ ಬಾಯಿ ತೊಳೆದುಕೊಳ್ಳಿ. ನಂತರವಷ್ಟೇ ಬ್ರೆಶ್ ಮಾಡುವುದುನ್ನು ರೂಢಿಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಮತ್ತೊಮ್ಮೆ ಬ್ರೆಶ್ ಮಾಡಿ. ನಿಮ್ಮ ಸಮಸ್ಯೆಗಳು ಮಾಯ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!