ಅಮೆರಿಕದಲ್ಲಿ ಮುಂದುವರಿದ ಶೀತಗಾಳಿ : ಸಾವಿನ ಸಂಖ್ಯೆ 59ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದಲ್ಲಿ ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಶೀತಗಾಳಿಗೆ ಅಮೆರಿಕ ಜನತೆ ಹೈರಾಣಾಗಿದ್ದಾರೆ.
ಚಳಿಗಾಲದಲ್ಲಿ ಅಪ್ಪಳಿಸಿದ ಚಂಡಮಾರುತದಿಂದಾಗಿ ಅಮೆರಿಕದಲ್ಲಿ ಶೀತಗಾಳಿ ಮುಂದುವರಿದಿದ್ದು, ಉತ್ತರ ಅಮೆರಿಕದಲ್ಲಿ ಸಾವಿನ ಸಂಖ್ಯೆ 59 ಕ್ಕೆ ಏರಿಕೆಯಾಗಿದೆ.

Winter storm in US 2022 LIVE Updates: Buffalo, New York death toll climbs to 25, over 2,000 flights cancelled | World News | Zee Newsನ್ಯೂಯಾರ್ಕ್ ನಗರದಲ್ಲಿಯೂ ಹಿಮದಿಂದಾಗಿ ಮನೆಯಿಂದ ಯಾರೂ ಹೊರಬರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅಮೆರಿಕದಿಂದ ವಿಮಾನ ಹಾರಾಟ ಸ್ಥಗಿತವಾಗಿದ್ದು, ವಿಮಾನ ನಿಲ್ದಾಣದ ಸುತ್ತ ಮಂಜು ಆವರಿಸಿದೆ. ಇನ್ನು ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದು, ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿದೆ.

US Winter Storm: 'Blizzard of the Century' Leaves Nearly 50 Dead Across America ಅಮೆರಿಕದ ಐದು ರಾಜ್ಯಗಳಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೆಂಟುಕಿಯಲ್ಲಿ ಹೆಚ್ಚು ಸಾವು ಸಂಭವಿಸಿದೆ. ಇನ್ನು ಮನೆಗಳು, ಕಟ್ಟಡಗಳು ಉರುಳಿದ್ದು, ಅವುಗಳ ಅವಶೇಷಗಳಡಿ ಜನ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!