Wednesday, February 8, 2023

Latest Posts

ಅನಕಾಪಲ್ಲಿಯ ಪರವಾಡದಲ್ಲಿ ಅಗ್ನಿ ಅವಘಡ, ಐವರ ಸಾವು: ಮೃತರ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಾರಸ್ ಫಾರ್ಮಾ ಕಂಪನಿಯಲ್ಲಿ ಅಗ್ನಿ ಅವಘಡ ಉಂಟಾಗಿ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಅನಕಾಪಲ್ಲಿ ಜಿಲ್ಲೆಯ ಪರವಾಡದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಲಾರಸ್ ಫಾರ್ಮಾ ಕಂಪನಿಯ ಘಟಕ ಎಂಬಿ6 ಬ್ಲಾಕ್‌ನಲ್ಲಿರುವ ರಿಯಾಕ್ಟರ್ ಅಡಿಯಲ್ಲಿ ರಬ್ಬರ್ ಅಂಟಿಕೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿ ಕಾರ್ಮಿಕರು ಬೆಂಕಿಯಲ್ಲಿ ಸಿಲುಕಿಕೊಂಡರು. ಕೂಡಲೇ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಕಿ ಹೊತ್ತಿಕೊಂಡ ಕೂಡಲೇ ಅಲ್ಲಿದ್ದ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿಯನ್ನು ಹತೋಟಿಗೆ ತಂದರು.

ಖಮ್ಮಂ ಜಿಲ್ಲೆಯ ರಾಂಬಾಬು, ಗುಂಟೂರು ಜಿಲ್ಲೆಯ ರಾಜೇಶ್ ಬಾಬು, ರಂಗಾರೆಡ್ಡಿ ಜಿಲ್ಲೆಯ ಸತೀಶ್, ಅನಕಾಪಲ್ಲಿ ಜಿಲ್ಲೆಯ ರಾಮಕೃಷ್ಣ ಮತ್ತು ಚೋಡವರಂ ಕ್ಷೇತ್ರದ ವೆಂಕಟರಾವ್ ಈ ಐವರು ಕಾರ್ಮಿಕರು ಬೆಂಕಿಗೆ ಆಹುತಿಯಾದವರೆಣದು ಗುರುತಿಸಲಾಗಿದೆ.

ಲಾರಸ್ ಫಾರ್ಮಸಿಯಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಸಿಎಂ ಜಗನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ಜಗನ್ ಆದೇಶದ ಪ್ರಕಾರ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಗಾಯಾಳುಗಳಿಗೆ ತುರ್ತು ಮತ್ತು ಉತ್ತಮ ಚಿಕಿತ್ಸೆ ನೀಡಲು ಸಿಎಂ ಜಗನ್ ಆದೇಶಿಸಿದರು. ಲಾರಸ್ ಫಾರ್ಮಾ ಸಿಟಿಯಲ್ಲಿ ಬೆಂಕಿ ಅವಘಡದ ಬಗ್ಗೆ ಸಿಎಂ ಜಗನ್ ತನಿಖೆಗೆ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!