HEALTH | ಥಂಡಿಗಾಳಿ ಬೀಸೋಕೆ ಶುರುವಾಗಿದೆ, ಆರೋಗ್ಯ ಕಾಪಾಡೋಕೆ ಬೆಲ್ಲದ ಬಳಕೆ ಹೆಚ್ಚು ಮಾಡಿ..

ಚಳಿಗಾಲದಲ್ಲಿ ದೇಹ ಬೆಚ್ಚಗಾಗಿಡುವುದರ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕಾಗುತ್ತದೆ. ಆಹಾರದ ಬಗ್ಗೆ ಪ್ರಮುಖವಾಗಿ ಕಾಳಜಿ ವಹಿಸುವುದು ಅತೀ ಅಗತ್ಯ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದರೆ ಚಳಿಗಾಲದಲ್ಲಿ ಹೇಗೆ ಯಾವ ವಸ್ತುವನ್ನು ತಿನ್ನಬೇಕು ಎಂದು ನೋಡೋಣ.

ಬೆಲ್ಲ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಇಷ್ಟಪಡುವ ಬೆಲ್ಲ ಆರೋಗ್ಯದ ದೃಷ್ಠಿಯಿಂದಲೂ ಅತೀ ಉತ್ತಮವಾದುದು. ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ಅನೇಕ ಲಾಭಗಳಿವೆ. ಬೆಲ್ಲವನ್ನು ಬಿಸಿ ಆಹಾರ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಚಳಿಗಾಲದಲ್ಲಿ ಬೆಲ್ಲ ತಿನ್ನುವುದು ಆರೋಗ್ಯದ ವಿಚಾರದಲ್ಲಿ ಒಳ್ಳೆಯ ಅಂಶವಾಗಿದೆ. ಆಮ್ಲ ಪುಡಿಯನ್ನು ಬೆಲ್ಲದೊಂದಿಗೆ ಸೇರಿಸಿ ಸೇವಿಸುವುದರಿಂದ ಆರೋಗ್ಯ ವೃದ್ಧಿಗೆ ಉತ್ತಮವಾಗುತ್ತದೆ. ಬೆಲ್ಲದೊಂದಿಗೆ ತಾಜಾ ಆಮ್ಲ ಸೇವಿಸಬಹುದು. ಇದರ ಸಿಹಿ ಹುಳಿ ರುಚಿ ದೇಹದ ಆರೋಗ್ಯ ವೃದ್ಧಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಮುಖ್ಯವಾಗಿ ಚಳಿಗಾಲದಲ್ಲಿ ಬೆಲ್ಲವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಿಮೋಗ್ಲೋಬಿನ್ ಹೆಚ್ಚುವಿಕೆಗೂ ಸಹಕಾರಿಯಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಾಗಿ ಇರಿಸಿಕೊಳ್ಳಲು ಬೆಲ್ಲದ ಚಹಾ ಸೇವಿಸಬಹುದು. ಇದಕ್ಕೆ ತುಳಸಿ ಎಲೆ ಬಳಸಿದರೆ ರಕ್ತ ಶುದ್ಧವಾಗುವ ಜೊತೆಗೆ ಅಲರ್ಜಿಯಂತಹ ಖಾಯಿಲೆ ದೂರವಾಗುತ್ತದೆ.

ಚಳಿಗಾಲದಲ್ಲಿ ಜೀರ್ಣದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ತುಪ್ಪದೊಂದಿಗೆ ಬೆಲ್ಲವನ್ನು ಬೆರೆಸಿ ತಿನ್ನುವುದು ಉತ್ತಮ ಔಷಧ. ಜೀರ್ಣಕ್ರಿಯೆ ಹೆಚ್ಚುವಂತೆ ಮಾಡುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ರಾತ್ರಿ ಹೊತ್ತು ಹಾಲಿಗೆ ಬೆಲ್ಲ ಮತ್ತು ಚಿಟಿಕಿ ಅರಶಿನಪುಡಿ ಬೆರೆಸಿ ಕುಡಿದರೆ ಹೊಟ್ಟೆಯ ಉರಿಯೂತ ಕಡಿಮೆಯಾಗುತ್ತದೆ. ಉಸಿರಾಟ,ಶೀತದ ತೊಂದರೆಯೂ ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!