ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಷ್ಟಪಟ್ಟು ಬೆಳೆದ ಬೆಳೆ ಕಟಾವಿಗೆ ಬರುವ ಸಮಯಕ್ಕೆ ಪ್ರಕೃತಿ ವಿಕೋಪಗಳಿಂದಲೂ, ಮಾರುಕಟ್ಟೆ ಬೆಲೆಯಿಂದಲೋ ಒಂದಿಲ್ಲೊಂದು ಹೊಡೆತ ಬೀಳುತ್ತಲೇ ಇರುತ್ತದೆ. ಇದೀಗ ಸಾಗರದ ಎಡ ಕಾಲುವೆಗೆ ನಿರ್ಮಿಸಿರುವ ಗೇಟ್ ಕಳಚಿಬಿದ್ದು, ನೂರಾಋಉ ಎಕರೆ ಬೆಳೆ ನೀರುಪಾಲಾದ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮುನಗಲ ಮಂಡಲ ಕೇಂದ್ರದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಕಾಲುವರೆಯ ಗೇಟ್ ಕಳಚಿಬಿದ್ದಿದ್ದು, ಘಟನೆಯಿಂದ ಸಾಗರದ ಎಡ ಕಾಲುವೆ ನೀರು ತಗ್ಗು ಪ್ರದೇಶಗಳಲ್ಲಿ ಹರಿಯಿತು. ಇದರಿಂದಾಗಿ ಚಿಲುಕೂರು ಮಂಡಲದ ವಿವಿಧೆಡೆ ಕಟಾವಿಗೆ ಬಂದಿದ್ದ ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ. ಮೇಲಾಗಿ ಕಟಾವು ಮಾಡಿ ಹೊಲಗಳಲ್ಲಿ ಬಿಟ್ಟ ಭತ್ತ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದು, ರೈತರು ಕಣ್ಣೀರು ಹಾಕಿದ್ದಾರೆ.
ಮುಂಜಾನೆ ಸಾಗರ ಸಿಇ ರಮೇಶ್ ಬಾಬು, ಎಸ್‌ಇ ನರಸಿಂಹರಾಜು ನಾಲೆ ಪರಿಶೀಲನೆ ನಡೆಸಿ ನೀರು ನಿಲ್ಲಿಸಿದರು. ಆದರೆ ಬೆಳೆ ನೀರಿನಲ್ಲಿ ಮುಳುಗಿದ್ದರಿಂದ ರೈತರು ಆಂದೋಲನದ ಹಾದಿ ಹಿಡಿದಿದ್ದಾರೆ. ಆಗಿರುವ ನಷ್ಟವನ್ನು ಸರಿದೂಗಿಸಿ ಎಂದು ಆಕ್ರೋಶ ಹೊರಹಾಕಿದರು.