ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಜೆಂಟೀನಾದ ನೂತನ ಅಧ್ಯಕ್ಷರಾಗಿ ಜೇವಿಯರ್ ಮಿಲೀ ಆಯ್ಕೆಯಾಗಿದ್ದಾರೆ.
ಅರ್ಜೆಂಟೀನಾದ ಅಧ್ಯಕ್ಷೀಯ ಮತದಾನದಲ್ಲಿ ಬಲಪಂಥೀಯ ಜನಪ್ರಿಯ ನಾಯಕ ಜೇವಿಯರ್ ಮಿಲೀ ಅವರನ್ನು ಭಾನುವಾರದಂದು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಲೀ ಅವರ ಪ್ರತಿಸ್ಪರ್ಧಿ ಪೆರೋನಿಸ್ಟ್ ಆರ್ಥಿಕ ಸಚಿವ ಸೆರ್ಗಿಯೊ ಮಾಸ್ಸಾಗೆ 44.2 ರಷ್ಟು ಮತ್ತು ಮಿಲೀ ಅವರಿಗೆ ಶೇ.55.8ರಷ್ಟು ಮತಗಳು ಬಂದಿದ್ದವು. ಈ ಮೂಲಕ ಮಿಲೀ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಫಲಿತಾಂಶ ಘೋಷಣೆಯ ಬಳಿಕ ಡೌನ್ಟೌನ್ ಬ್ಯೂನಸ್ ಐರಿಸ್ನಲ್ಲಿ ನೂರಾರು ಮಿಲೀ ಬೆಂಬಲಿಗರು ಸಂಭ್ರಮಿಸಿದರು.