May 26, 2026
Tuesday, May 26, 2026
spot_img

ಕಾಲೇಜುಗಳು ಡ್ರಗ್ಸ್‌ ಹಬ್‌ ಆಗ್ತಿವೆ, ಸರ್ಕಾರ ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕು: ಮಹೇಶ ಟೆಂಗಿನಕಾಯಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಲವ್ ಜಿಹಾದ್ ನಡೆಯುತ್ತಿದ್ದವೂ ಈಗ ಜಿಮ್ ಜಿಹಾದ್ ಆಗುತ್ತಿವೆ. ಕಾಲೇಜ್‌ಗಳಲ್ಲಿ ಇಂತಹ ಘಟನೆಗೆ ಹೆಚ್ಚಾಗಿವೆ. ಡ್ರಗ್ಸ್ ಅವ್ಯಾಹತವಾಗಿ ನಡೆಯುತ್ತಿವೆ. ಈಗಲಾದರೂ ಜನ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಗೂ ಇಲಾಖೆ ಯಾರನ್ನು ರಕ್ಷಿಸಲು ಹೋಗಿ ಅಮಾಯಕರು ಬಲಿಯಾಗಬಾರದು. ಹಿಂದು ಸಮಾಜದ ಸಹನೆ ಪರೀಕ್ಷೆ ಮಾಡಬಾರದು. ಮುಂದೆ ಆಗುವ ಅನಾಹುತಕ್ಕೆ ಸರ್ಕಾರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಲ್ಲಿ ಮುಖ್ಯಮಂತ್ರಿ, ಸಚಿವರ ಈ ಬಗ್ಗೆ ಮಾತನಾಡುತ್ತಿಲ್ಲ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ, ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ. ಇಂತಹ ಘಟನೆಗಳು ಸಮಾಜದಲ್ಲಿ ನಡೆದಾಗ ಎಲ್ಲ ಪಕ್ಷಗಳು, ಸಮಾಜ, ಜಾತಿಗಳು ವಿರೋಽಸಬೇಕು. ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಈ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಗೃಹ ಸಚಿವರ ಒಳ್ಳೆಯವರಿದ್ದು, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ಆಗ್ರಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !