25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಮಿಲಿಟರಿ ಸೇವೆ ಅವಕಾಶ ಕಲ್ಪಿಸಿದ ಕೊಲಂಬಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಮಿಲಿಟರಿ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವ ಮಹಿಳೆಯರಿಗೆ ಕೊಲಂಬಿಯಾ ದೇಶವು ಮಹತ್ವದ ಸುದ್ದಿಯೊಂದನ್ನು ನೀಡಿದೆ. 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಮಿಲಿಟರಿ ಸೇವೆಗೆ ಕೊಲಂಬಿಯಾ ಅವಕಾಶ ನೀಡಿದೆ. ಕಳೆದ ತಿಂಗಳು ಅಂದರೆ ಫೆಬ್ರವರಿಯಲ್ಲಿ ಕೊಲಂಬಿಯಾದ ಸೈನ್ಯದಲ್ಲಿ 1,296 ಮಹಿಳೆಯರ ಸಮೂಹವನ್ನು ದಾಖಲಿಸಲಾಗಿದೆ.

ಕೊಲಂಬಿಯಾದಲ್ಲಿ 18 ರಿಂದ 24 ವರ್ಷ ವಯಸ್ಸಿನ ಪುರುಷರಿಗೆ ಕಡ್ಡಾಯ ಮಿಲಿಟರಿ ಸೇವೆಯನ್ನು ಹೊಂದಿದೆ. ಸೈನ್ಯವು ಯುವ ನೇಮಕಾತಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಮೂಲಸೌಕರ್ಯಗಳ ರಕ್ಷಣೆ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ ಅದರ ವೃತ್ತಿಪರ ಸೈನಿಕರು ಮಾದಕವಸ್ತು ಕಳ್ಳಸಾಗಣೆ ಗುಂಪುಗಳು ಮತ್ತು ಬಂಡಾಯ ಗುಂಪುಗಳನ್ನು ಎದುರಿಸುತ್ತಾರೆ.

ಈ ವರ್ಷ ಅಧಿಕಾರಿಗಳು 18 ರಿಂದ 24 ವರ್ಷ ವಯೋಮಿತಿಯನ್ನು ಹೊಂದಿರುವ ಮಹಿಳೆಯರಿಗೆ ಸ್ವಯಂಪ್ರೇರಣೆಯಿಂದ ಸೇನೆಗೆ ಸೇರಲು ಅವಕಾಶ ನೀಡಿದ್ದಾರೆ. ಸೇನೆಯು ಮಹಿಳೆಯರ ಪಾತ್ರವನ್ನು ಬಲಪಡಿಸುವ ಪ್ರಯತ್ನದ ಭಾಗವಿದಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!