ಶೂಟಿಂಗ್ ಶುರು ಮಾಡಿದ `ಖುಷಿ’ ತಂಡ: ಮಹಿಳಾ ದಿನಾಚರಣೆಯಂದು ಸ್ಯಾಮ್‌ಗೆ ಗ್ರಾಂಡ್‌ ವೆಲ್‌ಕಮ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಯಿನ್ ಸಮಂತಾ ಮಯೋಸಿಟಿಸ್ ನಿಂದ ಚೇತರಿಸಿಕೊಂಡಿದ್ದು, ಸದ್ಯ ಸರಣಿ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ಒಂದೆಡೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರೆ, ಇನ್ನೊಂದೆಡೆ ಪ್ರಮೋಷನ್‌ ಮಾಡುತ್ತಿದ್ದಾರೆ. ಸಮಂತಾ ಸೋಷಿಯಲ್ ಮೀಡಿಯಾದಲ್ಲೂ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ.

ಸಮಂತಾ ಸದ್ಯ ಬಾಲಿವುಡ್‌ನಲ್ಲಿ ಸಿಟಾಡೆಲ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಸಮಂತಾ ಕೈಯಲ್ಲೂ ಕೆಲವು ಸಿನಿಮಾಗಳಿವೆ. ಇಷ್ಟು ದಿನಗಳಿಂದ ಸಮಂತಾ ಆರೋಗ್ಯ ಸರಿಯಿಲ್ಲದ ಕಾರಣ ಸಮಂತಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು. ಇದೀಗ ಸಮಂತಾ ಮತ್ತೆ ಕೆಲಸಕ್ಕೆ ಬಂದಿದ್ದು, ಖುಷಿ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ.

ಇತ್ತೀಚೆಗಷ್ಟೇ ಮಯೋಸಿಟಿಸ್‌ನಿಂದ ಬಳಲುತ್ತಿದ್ದ ಸಮಂತಾ ಖುಷಿ ಚಿತ್ರದ ಶೂಟಿಂಗ್‌ಗೆ ಮರಳಿದ್ದಕ್ಕೆ ಚಿತ್ರತಂಡ ಭವ್ಯ ಸ್ವಾಗತ ಕೋರಿದೆ. ಮಾರ್ಚ್ 8 ಮಹಿಳಾ ದಿನದಂದು ಸಮಂತಾ ಖುಷಿಯಿಂದ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಮಂತಾಗೆ ಗ್ರ್ಯಾಂಡ್ ವೆಲ್ಕಮ್ ಎಂದು ಬ್ಯಾನರ್ ಹಾಕಿದ್ದ ಚಿತ್ರತಂಡ, ಸ್ಯಾಮ್ ಜೊತೆ ಕೇಕ್ ಕಟ್ ಮಾಡಿ ಸೆಟ್ ನಲ್ಲಿ ಸದ್ದು ಮಾಡಿದೆ. ಇದರಿಂದ ಸ್ಯಾಮ್ ಅಭಿಮಾನಿಗಳ ಜೊತೆಗೆ ವಿಜಯ್ ದೇವರಕೊಂಡ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಬೇಗ ಮುಗಿಸಿ ಬಿಡುಗಡೆ ಮಾಡಲಿ ಎಂಬ ಖುಷಿ ಅಭಿಮಾನಿಗಳದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!