ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಬನ್ನಿ: ಕಾಂಗ್ರೆಸ್ -ಜೆಡಿಸ್ ಗೆ ನಳಿನ್ ಸವಾಲು

ಹೊಸ ದಿಗಂತ ವರದಿ, ಬಳ್ಳಾರಿ:

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ವಿರೋಧ ಪಕ್ಷದವರು ಮಾಡಲಿ, ನಮ್ಮದೂ ಸಹಕಾರ ಇದ್ದೇ ಇರಲಿದೆ, ತಾಕತ್ತಿದ್ದರೇ ಕಾಂಗ್ರೆಸ್, ಜೆಡಿಎಸ್ ನವರು ಬನ್ನಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡೋಣ ಎಂದು ‌ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ ಜೀ‌ ಅವರು ಸವಾಲು ಹಾಕಿದರು.

ಹೊಸಪೇಟೆಯಲ್ಲಿ ಸೋಮವಾರ ‌ಮಾತನಾಡಿದ ಅವರು,ಜೆಡಿಎಸ್, ಕಾಂಗ್ರೆಸ್ ನವರು ಚುನಾವಣೆಯ ಹಾದಿಯನ್ನೇ ತಪ್ಪಿಸುತ್ತಿದ್ದಾರೆ, ಬನ್ನಿ ನಮ್ಮ‌ ಅವಧಿಯಲ್ಲಿ ಮಾಡಿದ ಸಾಧನೆಗಳು, ನಿಮ್ಮ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ಜನರ ಮುಂದೆಯೇ ಚೆರ್ಚೆ ಮಾಡೋಣ, ಜನರಿಗೆ ವಿನಾಕಾರಣ ಸುಳ್ಳು ಹೇಳಿ ಹಾದಿ ತಪ್ಪಿಸುವ ಕೆಲಸ ಆಗಬಾರದು ಎಂದರು.

ನಮ್ಮ ಪಕ್ಷ ಭದ್ರವಾಗಿದೆ, ಯಾವುದೇ ನಾಯಕರಿಗೆ ಟಿಕೇಟ್ ನೀಡುವ ಭರವಸೆ ನೀಡಿಲ್ಲ , ಆಕಾಂಕ್ಷೆಗಳು ಹೆಚ್ಚು ಇರುವುದು ಸಹಜ, ಆದರೇ, ಅಂತಿಮ ತೀರ್ಮಾನ ಪಕ್ಷ ವರೀಷ್ಠರದ್ದು ಎಂದು ತಿಳಿಸಿದರು.

ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ವಾಗಿದೆ, ಈ ಚುನಾವಣೆಯ ಘೋಷವಾಕ್ಯವೇ ಅಭಿವೃದ್ಧಿ ಮಂತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದಿನ 75 ವರ್ಷಗಳ ಅವಧಿಯಲ್ಲಿ ಯಾವ ಸರ್ಕಾರಗಳು ಕೊಡದಷ್ಟು ಅನುದಾನವನ್ನು ಕೊಟ್ಟಿದೆ, ಅಭಿವೃದ್ಧಿ ಮಂತ್ರದಡಿ ಚುನಾವಣೆ ಹೋಗ್ತೇವೆ, ಕುಮಾರಸ್ವಾಮೀ ಯಾವುದೋ ಒಂದು ಸಮುದಾಯಕ್ಕೆ ಅಪಮಾನ ಮಾಡುವ ಮೂಲಕ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವುದು, ಸಿದ್ದರಾಮಯ್ಯ ಟಿಪ್ಪುವಿನ ವಂಶಸ್ಥರಂತೆ ತಿರುಗಾಡುವ ಅವಶ್ಯಕತೆ ನಮಗಿಲ್ಲ, ನಮ್ಮದು ಅಭಿವೃದ್ಧಿ ಮಂತ್ರ, ನರೇಂದ್ರ ಮೋದಿಜೀ, ಬೊಮ್ಮಾಯಿ ಅವರು ಹಾಗೂ ಬಿಎಸ್ ವೈ ಅವರು ಮಾಡಿದ ಅಭಿವೃದ್ಧಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!