ಇಂದು ಕಿರುತೆರೆಗೆ ಬರಲಿದೆ ‘ಡೇರ್ ಡೆವಿಲ್ ಮುಸ್ತಾಫಾ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆಯನ್ನಾಧರಿಸಿ ನಿರ್ಮಾಣಗೊಂಡ ಮತ್ತು ಭರ್ಜರಿ ಯಶಸ್ಸನ್ನು ಕಂಡ ಚಿತ್ರ ‘ಡೇರ್ ಡೆವಿಲ್ ಮುಸ್ತಾಫಾ’ ಇಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಈ ಸಿನಿಮಾದಲ್ಲಿ ಮುಸ್ತಾಫನಾಗಿ ಶಿಶಿರ್ ಹಾಗೂ ಅಯ್ಯಂಗಾರಿ ಪಾತ್ರದಲ್ಲಿ ಆದಿತ್ಯ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಇನ್ನು ನಟ ನಾಗಭೂಷಣ್, ಜೊತೆಗೆ ಮಂಡ್ಯ ರಮೇಶ್, ಉಮೇಶ್, ಸುಂದರ್ ವೀಣಾ, ಹರಿಣಿ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದು ಸಂಜೆ 6 ಗಂಟೆಗೆ ಈ ಚಲನಚಿತ್ರ ಪ್ರಸಾರವಾಗಲಿದ್ದು, ಬಹುತೇಕ ಹೊಸಬರೇ ಅಭಿನಯಿಸಿರುವ ಈ ಸಿನಿಮಾವನ್ನು ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!