CINEMA | ಎಲ್ಲಿಂದಾನೋ ಬರ‍್ತಾರೆ, ಬಾಲಿವುಡ್ ಬಗ್ಗೆ ಮಾತಾಡ್ತಾರೆ, ಪ್ರಿಯಾಂಕ ಚೋಪ್ರಾ ವಿರುದ್ಧ ರಾಖಿ ಸಾವಂತ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿದ್ಯಾಕೆ ಎನ್ನುವ ವಿಷಯದ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಷ್ಟೇ ಮಾತನಾಡಿದ್ದಾರೆ.

ಬಾಲಿವುಡ್‌ನಲ್ಲಿರುವ ಒಳರಾಜಕೀಯದಿಂದ ನನಗೆ ಚಾನ್ಸ್ ಸಿಗುವುದು ಕಮ್ಮಿಯಾಯ್ತು, ಬೇಕಂತಲೇ ನನ್ನನ್ನು ಬ್ಲಾಕ್ ಮಾಡಿದ್ದರು, ನೊಂದು ಹಾಲಿವುಡ್‌ಗೆ ಹೋದೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

ಈ ಬಗ್ಗೆ ರಾಖಿ ಸಾವಂತ್ ಮಾತನಾಡಿದ್ದು, ಸಾಕಷ್ಟು ಹಿಂದಿ ಸಿನಿಮಾ ಮಾಡಿದ್ದಾರೆ, ನನಗೆ ಅವರು ಇಷ್ಟ. ಆದರೆ ಬಾಲಿವುಡ್ ಬಗ್ಗೆ ಏನೇನೋ ಮಾತನಾಡೋದನ್ನು ಸಹಿಸೋದಿಲ್ಲ. ಬಾಲಿವುಡ್ ಅನ್ನ ಕೊಟ್ಟಿದೆ. ಸಮಸ್ಯೆ ಬಂದಾಗ ಅದರ ಬಗ್ಗೆ ಮಾತನಾಡಬೇಕು, ಈಗ ಮಾತನಾಡೋದು ಯಾಕೆ? ಇದು ಸರಿಯಲ್ಲ. ಇನ್ನೊಬ್ಬರ ಹೆಸರು ಹಾಳು ಮಾಡೋದು ತಪ್ಪು. ನಮ್ಮ ಬಾಲಿವುಡ್ ಸಿಹಿ ತಿಂದು ಅದರ ಬಗ್ಗೆಯೇ ಮಾತನಾಡೋದನ್ನು ಒಪ್ಪೋದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!