ನೀಲಿಚಿತ್ರ ತಾರೆಗೆ ಹಣ ಪಾವತಿ: ಅಮೆರಿಕ ಮಾಜಿ ಅಧ್ಯಕ್ಷಗೆ ಶುರುವಾಗಿದೆ ಬಂಧನ ಭೀತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೀಲಿ ಚಿತ್ರ ತಾರೆಗೆ ಹಣ ಪಾವತಿ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಈ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ದೋಷಾರೋಪಣೆ ಮಾಡಿದ್ದು, 2016ರ ಚುನಾವಣೆಗೂ ಮುನ್ನ ಟ್ರಂಪ್ ಪೋರ್ನ್ ಸ್ಟಾರ್ ಗೆ ದೊಡ್ಡ ಮೊತ್ತದ ಹಣ ನೀಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ.

ಇದರೊಂದಿಗೆ ಟ್ರಂಪ್ ಅಮೆರಿಕದಲ್ಲಿ ಕ್ರಿಮಿನಲ್ ಆರೋಪಕ್ಕೆ ಗುರಿಯಾದ ಮೊದಲ ಮಾಜಿ ಅಧ್ಯಕ್ಷರಾಗಿದ್ದಾರೆ. ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ 2006 ರಲ್ಲಿ ಡೊನಾಲ್ಡ್ ಟ್ರಂಪ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದರು. ಈ ವಿಷಯವನ್ನು ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. 2016 ರ ಚುನಾವಣೆಯ ಮೊದಲು ಈ ವಿಷಯವನ್ನು ಚಿತ್ರದಿಂದ ಹೊರಗಿಡಲು ಟ್ರಂಪ್ ಅವರ ವಕೀಲರು $ 1.3 ಮಿಲಿಯನ್ ಪಾವತಿಸಿದ್ದಾರೆ ಎಂದು ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದಾರೆ.

ನಂತರ ಟ್ರಂಪ್ ಅವರ ಕಾನೂನು ತಂಡದ ವಕೀಲರು ಡೇನಿಯಲ್ಸ್ ಅವರ ಆರೋಪ ನಿಜವೆಂದು ಘೋಷಿಸಿದರು. ಟ್ರಂಪ್ ಅವರ ಮಾಜಿ ವಕೀಲ ಮೈಕೆಲ್ ಕೊಹ್ಲ್ ಅವರು 1,30,000 ಡಾಲರ್‌ಗಳನ್ನು ಸ್ಟಾರ್ಮಿ ಡೇನಿಯಲ್ಸ್‌ಗೆ ನೀಡಿದ್ದಾರೆಂದು ಹೇಳಲಾಗಿದೆ. ಬಳಿಕ ಈ ಮೊತ್ತವನ್ನು ಕಾನೂನು ಶುಲ್ಕದಡಿ ಪಾವತಿಸಲಾಗಿದೆ ಎಂದು ದಾಖಲೆ ಹೇಳುತ್ತದೆ.

ಈ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಐದು ವರ್ಷಗಳ ಕಾಲ ತನಿಖೆ ನಡೆಸಲಾಗುತ್ತಿದೆ. 76 ವರ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ ಈಗಾಗಲೇ ಹಲವು ಆರೋಪಗಳಿವೆ. ಅದರಲ್ಲಿ ಇದೂ ಕೂಡ ಒಂದು. ಏತನ್ಮಧ್ಯೆ, ಯಾವುದೇ ಪ್ರಕರಣದಲ್ಲಿ ಯಾವುದೇ ಅಪರಾಧ ಸಾಬೀತಾಗಿಲ್ಲ ಮತ್ತು ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. 2024ರ ಚುನಾವಣೆಗೆ ತಯಾರಿ ನಡೆಸುತ್ತಿರುವ ಟ್ರಂಪ್ ತಪ್ಪಿತಸ್ಥರು ಎಂದು ಸಾಬೀತಾದರೂ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಸ್ತುತ ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿರುವುದರಿಂದ ಟ್ರಂಪ್‌ ಬಂಧನವಾಗುತ್ತಾ ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!