Wednesday, August 10, 2022

Latest Posts

ತೆರೆ ಮೇಲೆ ಬರಲಿದೆ ಅಟಲ್​ ಜೀವನಾಧಾರಿತ ಚಿತ್ರ: ಯಾರಾಗ್ತಾರೆ ನಾಯಕ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿವಂಗತ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಚಿತ್ರ ಬರಲಿದ್ದು, ಅಟಲ್​ಜೀ ಪಾತ್ರ ನಿರ್ವಹಿಸಲು ಸೂಕ್ತ ನಟನ ಹುಡುಕಾಟ ನಡೆಯುತ್ತಿದೆ.
ವಾಜಪೇಯಿ ಜೀವನವನ್ನು ತೆರೆ ಮೇಲೆ ತರಲು ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಒಟ್ಟಾಗಿ ಕೆಲಸ ಮಾಡ್ತಿದ್ದು, ಶೀಘ್ರದಲ್ಲೇ ನಾಯಕ ನಟ ಹಾಗೂ ನಿರ್ದೇಶಕರನ್ನು ಘೋಷಣೆ ಮಾಡಲಿದ್ದಾರೆ.
TAL(ಮೈನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ – ATAL) ಎಂದು ಶೀರ್ಷಿಕೆ ನೀಡಲಾಗಿದೆ. ಈ ಚಿತ್ರ ಹೆಸರಾಂತ ಲೇಖಕ ಉಲ್ಲೇಖ್​ ಎನ್​ಪಿಯವರ The Untold Vajpayee: Politician and Paradox ಪುಸ್ತಕದ ರೂಪಾಂತರವಾಗಿದೆ.
ಈ ಕುರಿತು ಮಾಹಿತಿ ನೀಡಿದ ನಿರ್ಮಾಪಕರಾದ ವಿನೋದ್​, ನನ್ನ ಜೀವನದುದ್ದಕ್ಕೂ ಅಟಲ್​ಜೀ ಅವರ ದೊಡ್ಡ ಅಭಿಮಾನಿ. ಹುಟ್ಟು ನಾಯಕ, ರಾಜನೀತಿ ತಜ್ಞ, ದೂರದೃಷ್ಟಿ ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಜೀವನವನ್ನು ಬೆಳ್ಳಿ ತೆರೆಗೆ ತರಲು ಮುಂದಾಗಿದ್ದೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss