Monday, October 2, 2023

Latest Posts

ಸನಾತನ ಧರ್ಮ ಕುರಿತ ಹೇಳಿಕೆಗೆ ಬದ್ಧ: ಯಾವುದೇ ಕೇಸ್ ಎದುರಿಸಲು ನಾನು ಸಿದ್ಧ ಎಂದ ಸ್ಟಾಲಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನಾತನ ಧರ್ಮ ಕುರಿತ ತಮ್ಮ ಹೇಳಿಕೆಗೆ ಬದ್ಧನಾಗಿದ್ದು,, ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದರೂ ಅದನ್ನು ಎದುರಿಸಲು ನಾನು ಸಿದ್ಧ ಎಂದು ತಮಿಳುನಾಡು ಸಚಿವ ಉದಯನಿದಿ ಸ್ಟಾಲಿನ್ ಸವಾಲು ಹಾಕಿದ್ದಾರೆ.

ಸನಾತನ ಧರ್ಮವು (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನ ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ದಾರೆ.

ನನ್ನ ವಿರುದ್ಧ ಬಿಜೆಪಿ (BJP) ಯಾವುದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ನಾನ್ ರೆಡಿ ಎಂದು ಸವಾಲೆಸೆದಿದ್ದಾರೆ.

‘ನಾನು ಸನಾತನ ಧರ್ಮವನ್ನ ಮಾತ್ರ ಟೀಕಿಸಿದ್ದೇನೆ. ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದು ಮತ್ತೆ ಹೇಳುತ್ತಿದ್ದೇನೆ. ಇದನ್ನು ನಿರಂತರವಾಗಿ ಹೇಳುತ್ತೇನೆ.
ಆದರೆ ನಾನು ನರಮೇಧಕ್ಕೆ ಆಹ್ವಾನ ನೀಡಿದ್ದೇನೆ ಎಂದು ಕೆಲವರು ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ದ್ರಾವಿಡಂ (ದ್ರಾವಿಡರು) ನಿರ್ಮೂಲನೆಯಾಗಬೇಕು ಎಂದು ಹೇಳುತ್ತಿದ್ದಾರೆ. ಹಾಗಾದರೆ ಡಿಎಂಕೆ ಪಕ್ಷದವರನ್ನ ಕೊಲ್ಲಬೇಕೇ? ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಅಂತಾ ಕರೆ ಕೊಟ್ಟಿದ್ದರು.ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ಸಿಗರನ್ನು ಕೊಲ್ಲಬೇಕು ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ.

ನನ್ನ ಹೇಳಿಕೆ ಬಿಜೆಪಿ ತಿರುಚಿದೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಬಿಜೆಪಿಗೆ INDIA ಒಕ್ಕೂಟವನ್ನ ಕಂಡರೆ ಭಯ. ಮೈತ್ರಿಗೆ ಹೆದರಿ ಹೀಗೆಲ್ಲಾ ಹೇಳುತ್ತಿದೆ. ನಾನು ನರಮೇಧಕ್ಕೆ ಕರೆ ಕೊಟ್ಟಿಲ್ಲ. ಬಿಜೆಪಿಯವರು ನನ್ನ ವಿರುದ್ಧ ಯಾವುದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ಸಿದ್ಧ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!