ಪಾಕ್‌ ಆಟಗಾರನ ವಿರುದ್ಧ ಅಮೋಘ ಜಯ: ಕುಸ್ತಿಯಲ್ಲಿ‌ ಭಾರತಕ್ಕೆ ಚಿನ್ನಗೆದ್ದ ನವೀನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ 74 ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್‌ ನಲ್ಲಿ ಭಾರತದ ಕುಸ್ತಿಪಟು ನವೀನ್ ಅವರು ಪಾಕಿಸ್ತಾನದ ಮುಹಮ್ಮದ್ ಷರೀಫ್ ತಾಹಿರ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಚಿನ್ನದ ಪದಕ ಗೆದ್ದರು.
ಕಾಮನ್‌ ವೆಲ್ತ್‌ ಗೆ ಪಾದಾರ್ಪಣೆ ಮಾಡಿದ ಚೊಚ್ಚಲ ಆವೃತ್ತಿಯ ಫೈನಲ್‌ ಪ್ರವೇಶಿದ ಸಾಧನೆ ಮಾಡಿದ್ದ 19 ವರ್ಷದ ನವೀನ್ ಫೈನಲ್ ಪಂದ್ಯದಲ್ಲೂ ಅಮೋಘ ಪ್ರದರ್ಶನ ತೋರಿದರು. ಭಾರತೀಯ ಆಟಗಾರನ ವೇಗದ ಮುಂದೆ ಪಾಕ್‌ನ ತಾಹಿರ್‌ ಆಟ ನಡೆಯಲಿಲ್ಲ. ಪಂದ್ಯದ ಆರಂಭದಲ್ಲೇ ತಾಹಿರ್‌ ರನ್ನು ಕೆಡವಿದ ನವೀನ್‌ ಸುಲಭ ಎರಡು ಪಾಯಿಂಟ್‌ ಗಳನ್ನು ಪಡೆದು 2-0 ಮುನ್ನಡೆ ಸಾಧಿಸಿದರು. ಮುಂದಿನ ಹಂತದಲ್ಲಿ ಮೂರು ಬಾರಿ ತಾಹಿರ್‌ ರನ್ನು ಟ್ಯಾಕಲ್‌ ಮಾಡಿ ನೆಲಕ್ಕೆ ಕೆಡವಿದ ನವೀನ್‌ ಅಮೋಘ 9-0 ಮುನ್ನಡೆ ಸಾಧಿಸಿದರು. ಆ ವೇಳೆಗೆ ತಮ್ಮ ಚಿನ್ನವನ್ನು ಖಚಿತ ಪಡಿಸಿಕೊಂಡಿದ್ದ ನವೀನ್‌ ಇನ್ನೊಂದು ಅಂಕವನ್ನು ತಾಂತ್ರಿಕ ಪ್ರಾವೀಣ್ಯತೆಯ ಮೇಲೆ ಗಳಿಸಿಕೊಳ್ಳುವ ಮೂಲಕ ಪಂದ್ಯವನ್ನು ಗೆದ್ದುಕೊಂಡರು.
“ನನ್ನ ದೇಶಕ್ಕಾಗಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ನಾನು ತುಂಬಾ ಸಂತೋಷಗೊಂಡಿದ್ದೇನೆ. ಇದು ತುಂಬಾ ಉತ್ತಮ ಪಂದ್ಯವಾಗಿತ್ತು. ನನ್ನ ಎದುರಾಳಿ ಕೂಡ ಉತ್ತಮವಾಗಿ ಆಡಿದರು. ನಾನು ಈ ತೂಕ ವಿಭಾಗದಲ್ಲಿ ನಾನು ಹೊಸಬನಾಗಿದ್ದೆ ಮತ್ತು  ಚಿನ್ನವು ನನಗೆ ತುಂಬಾ ಖುಷಿ ನೀಡಿದೆ ಎಂದು ಚಿನ್ನ ಗೆದ್ದ ನವೀನ್‌ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!