ಕಾಮನ್​ವೆಲ್ತ್​ ಗೇಮ್ಸ್​​: ಲಾನ್​ ಬೌಲ್ಸ್​​ನಲ್ಲಿ ಫೈನಲ್​ ಪ್ರವೇಶಿಸಿದ ಭಾರತ, ಮತ್ತೊಂದು ಪದಕ ಪಕ್ಕಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ಇದೀಗ ಮಹಿಳಾ ಫೋರ್ಸ್ ಲಾನ್​ ಬೌಲ್ಸ್​​ ತಂಡ ಫೈನಲ್​​ಗೆ ಲಗ್ಗೆ ಹಾಕಿದ್ದು, ಈ ಮೂಲಕ ಮತ್ತೊಂದು ಪದಕ ಖಾತ್ರಿಪಡಿಸಿದೆ.

ಬಲಿಷ್ಠ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 16-13ರ ಅಂತರದಿಂದ ಗೆಲುವು ದಾಖಲಿಸಿತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್​ನಲ್ಲಿ ಸ್ವರ್ಣ ಪದಕಕ್ಕಾಗಿ ಹೋರಾಟ ನಡೆಸಲಿದೆ. ಒಂದು ವೇಳೆ ಸೋತರೂ ಭಾರತೀಯ ತಂಡ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳಲಿದೆ.

ಈ ಕ್ರೀಡೆಯಲ್ಲಿ ನ್ಯೂಜಿಲ್ಯಾಂಡ್ ಈಗಾಗಲೇ 40 ಪದಕ ಗೆದ್ದಿದೆ. ಆದರೆ, ಇಂದು ನಡೆದ ಸೆಮೀಸ್​ನಲ್ಲಿ ಭಾರತದ ಅಮೋಘ ಆಟಕ್ಕೆ ಕಿವೀಸ್‌ ಸೋತು ನಿರ್ಗಮಿಸಿತು. ಉಳಿದಂತೆ,

ಇನ್ನು 50 ಮೀಟರ್ ಪುರುಷರ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಪದಕದಕಾಸೆ ಜೀವಂತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!