ಕಾಮನ್​ ವೆಲ್ತ್ ಗೇಮ್ಸ್: ಪದಕ ಗೆಲ್ಲುವುದರತ್ತ ದಾಪುಗಾಲು ಇಡುತ್ತಿರುವ ಭಾರತೀಯ ಕ್ರೀಡಾಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಮನ್​ ವೆಲ್ತ್ ಗೇಮ್ಸ್​​ನಲ್ಲಿ ಭಾರತ ಈವರೆಗೆ ಒಟ್ಟು 20 ಪದಕ ಗೆದ್ದಿದ್ದು, ಇನ್ನಷ್ಟು ಮೆಡಲ್ಸ್​ ಗೆಲ್ಲುವುದು ಖಚಿತವಾಗಿದೆ.

ಇದೀಗ ಭಾರತದ ಕುಸ್ತಿಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ಸ್ವರ್ಣ ಪದಕ ಗೆಲ್ಲುವುದರತ್ತ ದಾಪುಗಾಲು ಇಟ್ಟಿದ್ದಾರೆ.

ಪುರುಷರ 65 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬಜರಂಗ ಪೂನಿಯಾ ಫೈನಲ್​​ಗೆ ಲಗ್ಗೆ ಹಾಕಿದ್ದು, ಚಿನ್ನ ಗೆಲ್ಲುವ ತವಕದಲ್ಲಿದ್ದಾರೆ. ಇನ್ನೂ ದೀಪಕ್ ಪೂನಿಯಾ ಸಹ 86 ಕೆಜಿ ವಿಭಾಗದಲ್ಲಿ ಫೈನಲ್​ಗೆ ಲಗ್ಗೆ ಹಾಕಿದ್ದು, ಚೊಚ್ಚಲ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.
ಮತ್ತೊಂದೆಡೆ, 125 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋತಿರುವ ಮೋಹಿತ್ ಇದೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (62 ಕೆಜಿ), ಅಂಶು ಮಲಿಕ್ (57 ಕೆಜಿ) ಫೈನಲ್‌ಗೆ ಲಗ್ಗೆ ಹಾಕಿದ್ದು, ಭಾರತಕ್ಕೆ ಪದಕ ತಂದುಕೊಡುವುದು ಫಿಕ್ಸ್​ ಆಗಿದೆ. ಸೆಮೀಸ್​ನಲ್ಲಿ ಸೋತ ದಿವ್ಯಾ ಕಂಚಿಗಾಗಿ ಕಣಕ್ಕಿಳಿಯಲಿದ್ದಾರೆ.

ಬಾಕ್ಸಿಂಗ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಬಾಕ್ಸರ್ ಲವ್ಲಿನಾ ಕ್ವಾರ್ಟರ್​ ಫೈನಲ್​​ನಲ್ಲಿ ಸೋತು ಹೊರಬಿದ್ದಿದ್ದಾರೆ.
ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಇಲ್ಲಿಯವರೆಗೆ ಆರು ಚಿನ್ನ, ಏಳು ಬೆಳ್ಳಿ ಹಾಗೂ ಏಳು ಕಂಚು ಪಡೆದುಕೊಂಡಿದ್ದು, 20 ಪದಕ ಗೆದ್ದಿದೆ.

ಇನ್ನು ಭಾರತ ಪುರುಷರ ತಂಡ 4 x 400 ಮೀಟರ್ಸ್ ರಿಲೇಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದೆ. ಮೊಹಮ್ಮದ್ ಅನಸ್, ನೋಹ್ ನಿರ್ಮಲ್, ಮೊಹಮ್ಮದ್ ಅಜ್ಮಲ್ ಮತ್ತು ಅಮೋಜ್ ಜಾಕೋಬ್ ಅವರ ಕ್ವಾರ್ಟೆಟ್ ಹೀಟ್ 2 ನಲ್ಲಿ 3:06.97 ಸಮಯದೊಂದಿಗೆ ಎರಡನೇ ಸ್ಥಾನ ಗಳಿಸಿತು.

ಟೇಬಲ್ ಟೆನಿಸ್​ನಲ್ಲಿ ಭಾವಿನಾ ಪಟೇಲ್ ಪ್ಯಾರಾ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!