Monday, August 8, 2022

Latest Posts

ಕಾಮನ್​​ವೆಲ್ತ್​ ಗೇಮ್ಸ್: ಬೆಳ್ಳಿ ಹುಡುಗನನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ವೇಟ್​ ಲಿಫ್ಟರ್​​ ಸಂಕೇತ್​​ ಮಹದೇವ್ ಸರ್ಗರ್​​ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದು, ಮಹಾರಾಷ್ಟ್ರ ಮೂಲದ​ 21ಹರೆಯದ ಕ್ರೀಡಾಪಟುವಿನ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗ್ತಿದೆ.

ಸಂಕೇತ್ ಸರ್ಗರ್​​ ಬೆಳ್ಳಿ ಪದಕಕ್ಕೆ ಮುತ್ತಿಕ್ಕುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅಸಾಧಾರಣ ಪ್ರಯತ್ನದ ಮೂಲಕ ಸಂಕೇತ್ ಸರ್ಗರ್​​​ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ. ಈ ಮೂಲಕ ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತಕ್ಕೆ ಶುಭಾರಂಭ ಒದಗಿಸಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಮುಂಬರುವ ಎಲ್ಲ ಪ್ರಯತ್ನಕ್ಕೂ ಶುಭಾಶಯಗಳು ಎಂದಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಅಭಿನಂಧನೆ ಸಲ್ಲಿಸಿದ್ದು, ಕಾಮನ್​ವೆಲ್ತ್ ಗೇಮ್ಸ್​​ನ ವೇಟ್ ಲಿಫ್ಟಿಂಗ್​​ನಲ್ಲಿ ಬೆಳ್ಳಿ ಪದಕ ಗೆದ್ದ ಸಂಕೇತ್​​ಗೆ ಅಭಿನಂದನೆಗಳು. ನಿಮ್ಮ ಪರಿಶ್ರಮ, ಯಶಸ್ಸು ಇದೀಗ ಭಾರತಕ್ಕೆ ಕೀರ್ತಿ ತಂದಿದೆ. ಗೇಮ್ಸ್​ನಲ್ಲಿ ಭಾರತ ಪದಕಗಳ ಪಟ್ಟಿ ತೆರೆಯಲು ಮೊದಲಿಗರಾಗಿದ್ದಕ್ಕೆ ನನ್ನ ಶುಭಾಶಯಗಳು ಎಂದು ಹಾರೈಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಶುಭಾಶಯ ತಿಳಿಸಿದ್ದು, 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸಂಕೇತ್ ಭಾರತಕ್ಕೆ ಬೆಳ್ಳಿ ತಂದುಕೊಟ್ಟಿದ್ದಾರೆ. ಸ್ವಲ್ಪದರಲ್ಲಿ ಚಿನ್ನದ ಪದಕ ಮಿಸ್ ಮಾಡಿಕೊಂಡಿದ್ದಾರೆ. ಆದರೆ, ಅವರ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

ಬೇಸರ ವ್ಯಕ್ತಪಡಿಸಿದ ಸಂಕೇತ್​: ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿ ಚಿನ್ನ ಗೆಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಸಂಕೇತ್, ಬೆಳ್ಳಿ ಗೆದ್ದಿರುವುದಕ್ಕೆ ತೃಪ್ತಿ ಇದೆ ಎಂದಿದ್ದಾರೆ. ಚಿನ್ನ ಗೆಲ್ಲಲು ಕಳೆದ ನಾಲ್ಕು ವರ್ಷಗಳಿಂದ ನಾನು ತಯಾರಿ ನಡೆಸಿದ್ದೆ. ಆದರೆ, ಮೊಣಕೈ ಗಾಯದಿಂದಾಗಿ ಇದು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss