ಮುಜಫರ್‌ನಗರ ಜಿಲ್ಲಾ ಕಾರಾಗೃಹದಲ್ಲಿ ಕೋಮು ಸೌಹಾರ್ದತೆ ಮೆರೆದ ಕೈದಿಗಳು: ಹಿಂದೂ ಮುಸ್ಲಿಮರಿಂದ ನವರಾತ್ರಿ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲಾ ಕಾರಾಗೃಹದ ಹಿಂದೂ ಮತ್ತು ಮುಸ್ಲಿಂ ಕೈದಿಗಳು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ಸಲುವಾಗಿ ನವರಾತ್ರಿ ಹಬ್ಬವನ್ನು ಒಟ್ಟಾಗಿ ಆಚರಣೆ ಮಾಡುತ್ತಿದ್ದಾರೆ. ಹಲವಾರು ಮುಸ್ಲಿಂ ಕೈದಿಗಳು ಹಿಂದೂ ಕೈದಿಗಳೊಂದಿಗೆ ಉಪವಾಸವನ್ನು ಆಚರಿಸುತ್ತಿದ್ದಾರೆ.

ಈ ಕುರಿತು ಮುಜಾಫರ್‌ನಗರ ಜೈಲು ಅಧೀಕ್ಷಕ ಸೀತಾರಾಮ್ ಶರ್ಮಾ ಮಾತನಾಡಿ ಮುಸ್ಲಿಂ ಕೈದಿಗಳು ಜೈಲಿನೊಳಗೆ ದುರ್ಗಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ,
3,000 ಕ್ಕೂ ಹೆಚ್ಚು ಕೈದಿಗಳನ್ನು ಜೈಲಿನಲ್ಲಿ ಇರಿಸಲಾಗಿದೆ ಈ ಪೈಕಿ 1,104 ಹಿಂದೂ ಕೈದಿಗಳು ಮತ್ತು 218 ಮುಸ್ಲಿಂ ಕೈದಿಗಳು ಒಟ್ಟಿಗೆ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ಎಲ್ಲ ಪಂಗಡದ ಕೈದಿಗಳು ಯಾವುದೇ ತಾರತಮ್ಯವಿಲ್ಲದೆ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕಾರಾಗೃಹದಲ್ಲಿ ಒಂಬತ್ತು ದಿನಗಳ ನವರಾತ್ರಿ ಉತ್ಸವಗಳು ಸೆಪ್ಟೆಂಬರ್ 26, 2022 ರಂದು ಘಡಸ್ಥಾಪನಾ ವಿಧಿಯೊಂದಿಗೆ ಪ್ರಾರಂಭವಾಯಿತು. ಅಂದಿನಿಂದ ಪ್ರಾರಂಭವಾದ ಉಪವಾಸವು ಅಕ್ಟೋಬರ್ 5, 2022 ರಂದು ದುರ್ಗಾ ವಿಸರ್ಜನ್ ಅಥವಾ ದಸರಾ/ವಿಜಯದಶಮಿ ಆಚರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!