Sunday, February 5, 2023

Latest Posts

ಶಬರಿಮಲೈನಲ್ಲಿ ಅನ್ನದಾಸೋಹಕ್ಕೆ ಕಮ್ಯುನಿಸ್ಟ್ ಸರ್ಕಾರ ಅವಕಾಶ ನೀಡುತ್ತಿಲ್ಲ: ಸಂಪಂತಕುಮಾರ ಗುರೂಜಿ

ಹೊಸ ದಿಗಂತ ವರದಿ, ವಿಜಯಪುರ:

ಶಬರಿಮಲೈನಲ್ಲಿ ಅನ್ನದಾಸೋಹಕ್ಕೆ ಅಲ್ಲಿನ ಸರ್ಕಾರ ಅವಕಾಶ ನೀಡುತ್ತಿಲ್ಲ. ಕಮ್ಯುನಿಸ್ಟ್ ಸರ್ಕಾರ ಅಲ್ಲಿರುವ ಹೋಟೆಲ್ ಮಾಲೀಕರೊಂದಿಗೆ ಒಳಒಪ್ಪಂದ ಮಾಡಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಉಪಾಧ್ಯಕ್ಷ ಸಂಪಂತಕುಮಾರ ಗುರೂಜಿ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಅನ್ನ ದಾಸೋಹ ಕಾರ್ಯಕ್ರಮಕ್ಕೆ ಕಾನೂನು ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ, ನಮ್ಮ ಸಂಘಟನೆಯಿಂದ ಶಬರಿಮಲೈನಲ್ಲಿ ಪ್ಲಾಸ್ಟಿಕ್ ಮುಕ್ತ ಶಬರಿಮಲೈ ಮಾಡಲಾಗುತ್ತಿದೆ ಎಂದರು.

ಅದೇ ತರಹ ನಿರಂತರ ಅನ್ನ ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿ ಈಗಾಗಲೇ ಶಬರಿಮಲೈ ಹಲವು ಕಡೆಗೆ ಅನ್ನದಾನ ಮಾಡಲಾಗುತ್ತಿದೆ. ಕರ್ನಾಟಕ ಭಕ್ತರಿಗೆ ಭಾಷೆ ಸಮಸ್ಯೆ ಆಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.

ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!