ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲಟ್​ ಸಾನಿಯಾ ಮಿರ್ಜಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾಧಿಸುವ ಗುರಿ ಇದ್ದರೆ, ಯಾವುದೇ ಕಷ್ಟ ಎಂಬುದು ಇರುವುದಿಲ್ಲ. ಅಂತಹ ಸಾಧನೆಗೆ ಮಾದರಿಯಾಗಿದ್ದಾರೆ ಟಿವಿ ಮೆಕ್ಯಾನಿಕ್​ ನ ಮಗಳು. ಭಾರತೀಯ ವಾಯು ಪಡೆಯ ಎನ್​ಡಿಎ ಪರೀಕ್ಷೆಯಲ್ಲಿ 149ನೇ ಸ್ಥಾನಗಳಿಸುವ ಮೂಲಕ ಮುಸ್ಲಿಂ ಸಮುದಾಯದ ಯುವತಿಯೊಬ್ಬಳು ಫೈಟರ್​​ ಪೈಲಟ್​​ ಆಗಲು ಮುಂದಾಗಿದ್ದು, ಉತ್ತರ ಪ್ರದೇಶದ ಹಾಗೂ ಮುಸ್ಲಿಂ ಸಮುದಾಯದ ಫೈಟರ್​ ಪೈಲಟ್​ ಆಗಿ ಹೊರ ಹೊಮ್ಮಿದ್ದಾರೆ.

ಈ ಸಾಧನೆ ಕುರಿತು ಮಾತನಾಡಿರುವ ಸಾನಿಯಾ ಇರ್ಜಾ, ದೇಶದಲ್ಲಿ ಮಹಿಳಾ ಫೈಟರ್​ ಪೈಲಟ್​ಗಳ ಸಂಖ್ಯೆ ಕಡಿಮೆ ಇದೆ. ದೇಶದ ಮೊದಲ ಫೈಟರ್​ ಪೈಲಟ್​ ಆದ ಅವನಿ ಚತುರ್ವೇದಿ ನನಗೆ ಪ್ರೇರಣೆ. ಹೈ ಸ್ಕೂಲ್​ ಪಾಸ್​ ಆದ ಬಳಿಕ ನಾನು ಫೈಟರ್​ ಪೈಲಟ್​ ಆಗಬೇಕು ಎಂದು ನಿರ್ಧರಿಸಿದೆ. ನನ್ನ ಗುರಿಯನ್ನು ನಾನೀಗ ಸಾಧಿಸಿದ್ದೇನೆ. ಎನ್​ಡಿಎಯಲ್ಲಿ ಸಿಬಿಎಸ್​ಸಿ ಐಸಿಎಸ್​ ಬೋರ್ಡ್​ನಲ್ಲಿ ಓದಿದವರು ಮಾತ್ರ ಪಾಸ್​ ಆಗುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಉತ್ತರ ಪ್ರದೇಶ ಬೋರ್ಡ್​ ಮೂಲಕವೇ ನಾನು ಪಾಸ್​ ಆದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!