ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸಂಸ್ಕೃತದಲ್ಲಿ ಶುಭಾಶಯ ತಿಳಿಸಿದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರೊಬ್ಬರು ಸಂಸ್ಕೃತದಲ್ಲಿ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್‌ನ ವಿಸ್ತರಣೆಯನ್ನು ದ್ವಾರಕಾ ಸೆಕ್ಟರ್ 21 ರಿಂದ ಹೊಸ ಮೆಟ್ರೋ ಸ್ಟೇಷನ್ ‘ಯಶೋಭೂಮಿ ದ್ವಾರಕಾ ಸೆಕ್ಟರ್ 25’ ವರೆಗೆ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. ಬಳಿಕ ಮೆಟ್ರೂದಲ್ಲಿ ಸ್ವಲ್ಪ ದೂರುದವರೆಗೆ ಪ್ರಯಾಣಿಸಿದರು.

ಈ ವೇಳೆ ಮೆಟರೋದಲಿದ್ದ ಯುವತಿಯೊಬ್ಬರು ಸಂಸ್ಕೃತದಲ್ಲಿ ಹುಟ್ಟುಹಬ್ಬದ ಶ್ಲೋಕವನ್ನು ಹೇಳುವ ಮೂಲಕ ಮೋದಿಯವರನ್ನು ಸ್ವಾಗತಿಸಿದರು.

“ಜನ್ಮ-ದಿನಂ-ಇದಮ್ ಆಯಿ ಪ್ರಿಯ ಸಖೇ | ಶಾಂತನೋತು ತೇ ಸರ್ವದಾ ಮುದಮ್ || ಪ್ರಾರ್ಥಯಾಮಹೇ ಭಾವ ಶತಾಯುಷಿ | ಈಶ್ವರಸ್-ಸದಾ ತ್ವಾಂ ಚ ರಕ್ಷತು || ಪುಣ್ಯ ಕರ್ಮಣಾ ಕೀರ್ತಿಮಾರ್ಜಯ|ಜೀವನಂ ತವ ಭವತು ಸಾರ್ಥಕಮ್||  ಈ ಜನ್ಮದಿನವು ನಿಮಗೆ ಸಮೃದ್ಧಿ ಸಂತೋಷವನ್ನು ತರಲಿ ಮತ್ತು ನಿಮ್ಮ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತೇನೆ. ದೇವರು ಯಾವಾಗಲೂ ನಿಮ್ಮನ್ನು ರಕ್ಷಿಸಲಿ. ನೀವು ಉದಾತ್ತ ಕಾರ್ಯಗಳ ಹಾದಿಯಲ್ಲಿ ನಡೆಯಲಿ ಮತ್ತು ನಿಮ್ಮ ಜೀವನವು ಸಾರ್ಥಕವಾಗಲಿ ಎಂದು ಶುಭ ಹಾರೈಕೆ ತಿಳಿಸಿದರು.

ಮೆಟ್ರೋದಲ್ಲಿ ಪ್ರಯಾಣಿಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಸೆಲ್ಫಿಗೆ ಪೋಸ್‌ ಕೊಟ್ಟು ಜನರಿಂದ ಜನ್ಮದಿನದ ಶುಭಾಶಯಗಳನ್ನು ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!