April 21, 2026
Tuesday, April 21, 2026
spot_img

WFH | ಕಂಪನಿಗಳೇ, ಈ ಬಿಸಿಲಿನಲ್ಲಿ ಎಂಪ್ಲಾಯಿಗಳನ್ನು ಬೇಯಿಸೋ ಬದಲು ಮನೆಯಿಂದ ಕೆಲಸ ಮಾಡೋಕೆ ಹೇಳ್ಬಾರ್ದಾ?

ಯಾರಾದ್ರೂ ನಮಗೆ ವರ್ಕ್‌ ಫ್ರಮ್‌ ಹೋಮ್‌ ಕೊಟ್ಟು ಕಾಪಾಡಿ, ಪ್ಲೀಸ್‌..

ಆಫೀಸ್‌ಗೆ ಹೋಗುವ ಪ್ರತಿಯೊಬ್ಬ ಎಂಪ್ಲಾಯಿಯ ಮೈಂಡ್‌ ವಾಯ್ಸ್‌ ಇದೆ. ಮಕ್ಕಳಿಗೆ ಬೇಸಿಗೆ ರಜೆ ನೀಡುವಂತೆ ದೊಡ್ಡವರಿಗೆ ಬೇಸಿಗೆ ವರ್ಕ್‌ ಫ್ರಮ್‌ ಹೋಮ್‌ ಕೊಡಿ ಎಂದು ಎಷ್ಟೋ ಮಂದಿ ಕೇಳಿಕೊಂಡಿರುತ್ತಾರೆ. ಆದರೆ ಎಲ್ಲ ಕಂಪನಿಗಳು ಇದಕ್ಕೆ ಒಪ್ಪೋದಿಲ್ಲ. ಆಫೀಸಿಗೆ ಬರಲೇಬೇಕೆಂದು ಪಟ್ಟು ಹಿಡಿಯುತ್ತವೆ. ಸರ್ಕಾರ ಹೇಳುವ ತನಕ ಈ ವ್ಯವಸ್ಥೆ ಬದಲಾಗೋದಿಲ್ಲ. ವರ್ಕ್‌ಫ್ರಮ್‌ ಹೋಮ್‌ನಿಂದ ಏನು ಲಾಭ?

ಎಂಪ್ಲಾಯಿಗೆ..

ನಿತ್ಯವೂ ಸೂಟು, ಬೂಟು, ಫಾರ್ಮಲ್ಸ್‌, ಕುರ್ತಾ ಸೆಟ್‌ ಇನ್ನಿತರ ಸೆಖೆ ಬಟ್ಟೆಗಳನ್ನು ಹಾಕಿಕೊಳ್ಳೋದು ತಪ್ಪುತ್ತದೆ. ಪಂಚೆಯೋ, ಚಡ್ಡಿಯೋ ಹಾಕಿಕೊಂಡು ಮನೆಯಲ್ಲಿ ನೆಮ್ಮದಿಯಾಗಿ ಕೆಲಸ ಮಾಡುತ್ತಾರೆ.

ಬಿಸಿಲಿನ ಝಳದ ನಡುವೆ ಎರಡು ಬಸ್‌, ಒಂದು ಮೆಟ್ರೋ, ಕ್ಯಾಬ್‌, ಸಿಟಿ ಬಸ್‌ ಹತ್ತಿ ಆಫೀಸ್‌ ತಲುಪೋದು ಕಷ್ಟ. ಎನರ್ಜಿ, ಆರೋಗ್ಯ, ಹಣ ಎಲ್ಲವೂ ಉಳಿಯುತ್ತದೆ.

ಮನೆಯಲ್ಲಿಯೇ ಇದ್ದರೆ ನಾಲ್ಕು ಲೀಟರ್‌ ನೀರು, ಅಮ್ಮ ಕೊಡುವ ಹಣ್ಣು, ಜ್ಯೂಸ್‌ ಕುಡಿದು ಹೈಡ್ರೇಟ್‌ ಆಗಿ ಇರಬಹುದು. ಹೆಚ್ಚು ನೀರು ಕುಡಿದ ಕಾರಣ ಲೆಕ್ಕವಿಲ್ಲದಷ್ಟು ಬಾರಿ ವಾಶ್‌ರೂಮ್‌ಗೆ ಹೋಗಬಹುದು. ಯಾರ ಕೆಂಗಣ್ಣಿಗೂ ಗುರಿಯಾಗದೇ!

ಹೆಣ್ಣುಮಕ್ಕಳಿಗೆ ದುಬಾರಿ ವಾಟರ್‌ಪ್ರೂಫ್‌ ಮೇಕಪ್‌, ದಿನಕ್ಕೆ ನಾಲ್ಕು ಬಾರಿ ಸನ್‌ಸ್ಕ್ರೀನ್‌ ಹಚ್ಚೋದು ತಪ್ಪುತ್ತದೆ. ಮನೆಯಲ್ಲಿದ್ದರೆ ಒಮ್ಮೆ ಮುಖದ ತುಂಬಾ ಸನ್‌ಸ್ಕ್ರೀನ್‌ ಹಚ್ಚಿ ಕೂತರೆ ಇನ್ನು ಹಚ್ಚೋದು ಮರುದಿನವೇ.

ಮಧ್ಯಾಹ್ನದ ಊಟದ ಬ್ರೇಕ್‌ನಲ್ಲೊಂದು ಸಣ್ಣ ನಿದ್ದೆಯನ್ನೇ ಮಾಡಿಬಿಡಬಹುದು. ಮನೆಯಲ್ಲಿ ಅಲ್ಲದೇ ಹೋದ್ರೆ ಮಾಲ್‌ನಲ್ಲಿ, ಟ್ರಿಪ್‌ನಲ್ಲಿ ಗೆಸ್ಟ್‌ಹೌಸ್‌ನಲ್ಲಿ ಎಲ್ಲಾದ್ರೂ ಕೆಲಸ ಮಾಡ್ಬೋದು. ಮೈಂಡ್‌ ರಿಫ್ರೆಶ್‌ ಮಾಡ್ಕೋಬೋದು.

ಕಂಪನಿಗೆ..

ಮನೆಯಲ್ಲಿದ್ದುಕೊಂಡು ಏನೋ ಟೈಮ್‌ ವೇಸ್ಟ್‌ ಮಾಡ್ತಾ ಇದ್ದಾರೆ ಎಂದು ನೀವು ಅಂದುಕೊಳ್ತೀರ ಎಂದು ಎಂಪ್ಲಾಯಿಗಳು ಸಿಸ್ಟಮ್‌ ಮುಂದೆಯೇ ಇರುತ್ತಾರೆ. ನಿಮ್ಮನ್ನು ಇಂಪ್ರೆಸ್‌ ಮಾಡೋದಕ್ಕೆ ಸಾಕಷ್ಟು ಕೆಲಸ ಮಾಡ್ತಾರೆ. ಆಫೀಸ್‌ಗಿಂತ ಜಾಸ್ತಿ.

ಕಂಪನಿಯ ಎಸಿ, ಫ್ಯಾನ್‌, ಲೈಟ್‌ಗೆ ಬೇಕಾಗೋ ಕರೆಂಟ್‌ ಬಿಲ್‌ ಉಳಿತಾಯವಾಗುತ್ತದೆ. ಇನ್ನು ಎಂಪ್ಲಾಯಿಗಳ ಕಾಫಿ, ಟೀ, ತಿಂಡಿ, ಜ್ಯೂಸ್‌, ಗ್ರೀನ್‌ ಟೀ ಹಣವೂ ಉಳಿಯುತ್ತದೆ.

ಆಫೀಸಿಗಿಂತ ಜನ ಮನೆಯಲ್ಲಿಯೇ ಎಫೀಶಿಯಂಟ್‌ ಆಗಿ ಕೆಲಸ ಮಾಡುತ್ತಾರಂತೆ. ಆಫೀಸ್‌ನಲ್ಲಿ ಸ್ನೇಹಿತರ ಜೊತೆ ಮಾತು ಕತೆ, ಊಟದ ಗಂಟೆಗಟ್ಟಲೆ ಬ್ರೇಕ್‌ನಿಂದ ಒಂದು ಕೆಲಸ ಆಗೋಕೆ ಎರಡು ದಿನ ಬೇಕು. ಆದರೆ ಮನೆಯಲ್ಲಿ ಒಂದೇ ದಿನಕ್ಕೆ ಎರಡು ಕೆಲಸ ಮುಗಿದುಬಿಡುತ್ತದೆ.

ಆಫೀಸ್‌ನಲ್ಲಿರುವ ಎಂಪ್ಲಾಯಿಗೆ ಮನೆಯಲ್ಲಿರುವ ತಾಯಿಯ ಚಿಂತೆ ಇರುತ್ತದೆ. ಇದರಿಂದಾಗಿ ಅಷ್ಟೊಂದು ಫೋಕಸ್‌ ಇರೋದಿಲ್ಲ. ಒತ್ತಡ ಮಾಡಿಕೊಳ್ತಾರೆ. ಆದರೆ ಮನೆಗೆ ಕಳಿಸಿಬಿಟ್ರೆ ತಾಯಿಯೂ ಕಣ್ಮುಂದೆ. ಕೆಲಸವೂ ಸರಾಗ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !