September 14, 2026
Monday, September 14, 2026
spot_img

SUMMER | ಬೇಸಿಗೆಯಲ್ಲೇಕೆ ಊಟ ತಿಂಡಿ ಮೇಲೆ ಆಸಕ್ತಿ ಇರೋದಿಲ್ಲ?

ಬೇಸಿಗೆಯಲ್ಲೇಕೆ ಕಣ್ಣ ಮುಂದೆ ಮೃಷ್ಟಾನ್ನವಿದ್ದರೂ ತಿನ್ನಬೇಕು ಅನ್ನಿಸೋದಿಲ್ಲ. ಒಂದು ಲೋಟ ನೀರು ಕುಡಿದರೆ ಸಾಕು, ಗಂಜಿ ಕುಡಿದರೂ ಸಾಕು ಊಟವೇ ಬೇಡ. ಈ ರೀತಿ ಆಗೋದು ಯಾಕೆ?

ಇಡೀ ವಾತಾವರಣದಲ್ಲಿಯೇ ಅಷ್ಟೊಂದು ಹೀಟ್‌ ಇರುವಾಗ ದೇಹಕ್ಕೆ ಮತ್ತೆ ತನ್ನನ್ನು ಹೀಟ್‌ ಮಾಡ್ಕೊಳ್ಳೋಕೆ ಇಷ್ಟ ಆಗೋದಿಲ್ಲ. ಊಟ ಮಾಡೋದು ಅಂದ್ರೆ ಅದನ್ನು ಡೈಜೆಸ್ಟ್‌ ಮಾಡೋದು, ಕ್ಯಾಲೋರಿ ಬರ್ನ್‌ ಮಾಡೋದು ಇನ್ನಿತರ ಕೆಲಸಗಳನ್ನು ದೇಹ ಮಾಡಬೇಕು. ಇದಕ್ಕಾಗಿ ದೇಹದ ತಾಪಮಾನ ಹೆಚ್ಚಳವಾಗುತ್ತದೆ. ಹೀಗಾಗಿ ಹೊಟ್ಟೆಯಿಂದ ಮೆದುಳಿಗೆ ಹಸಿವನ್ನು ಹೋಗಲಾಡಿಸುವ ಸಿಗ್ನಲ್‌ ಸಿಗುತ್ತದೆ. ಅದಕ್ಕೆ ನಮಗೆ ಹೊಟ್ಟೆ ತುಂಬಿದಂತೆ ಅನಿಸುತ್ತದೆ.

ದೇಹ ಬಿಸಿಲಿನಿಂದ ಬಳಲುತ್ತದೆ. ಹೀಗಾಗಿ ಯಾವಾಗಲೂ ನೀರು ಕುಡಿಯಲು ಉತ್ತೇಜನ ಸಿಗುತ್ತದೆ. ನೀರು ಕುಡಿದಂತೆ ಹೊಟ್ಟೆ ತುಂಬಿದೆ ಎಂದು ಮೆದುಳು ಅರ್ಥ ಮಾಡಿಕೊಳ್ಳುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !