ಕೇವಲ ಮೂರು ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗುವ ಬ್ಯಾಟರಿ ಅಭಿವೃದ್ಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಬ್ಯಾಟರಿ ಮೂರು ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು ಏಕೆಂದರೆ ಹಾರ್ವರ್ಡ್ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ಮೂರು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ಇವಿ ಬ್ಯಾಟರಿಯೊಂದನ್ನು ಅಭಿವೃದ್ಧಿಪಡಿಸಿದೆ.

ಇವಿ ಕಾರ್‌ಗಳಿಗಾಗಿ ಈ ಬ್ಯಾಟರಿ ಅಭಿವೃದ್ಧಿಪಡಿಸಿದ್ದು, ಈ ಬ್ಯಾಟರಿ 20 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಅಂದರೆ ಈಗಿರುವ ಬ್ಯಾಟರಿಗಳಿಗಿಂತ ಎರಡು ಪಟ್ಟು ಹೆಚ್ಚು.

ಹಾರ್ವರ್ಡ್‌ನ ತಂತ್ರಜ್ಞಾನ ಅಭಿವೃದ್ಧಿಯ ಕಚೇರಿಯಿಂದ, ಬ್ಯಾಟರಿ ಅಭಿವೃದ್ಧಿಗೆ ಬಳಸುವ ತಂತ್ರಜ್ಞಾನದ ಪರವಾನಗಿ ಪಡೆಯಲಾಗಿದೆ. ಅಲ್ಲದೇ ಪ್ರಿಮವೆರಾ ಕ್ಯಾಪಿಟಲ್ ಗ್ರೂಪ್‌ನಿಂದ ಈ ಸ್ಟಾರ್ಟ್‌ಅಪ್ $5.15 ಮಿಲಿಯನ್ ಬಂಡವಾಳ ಪಡೆದುಕೊಂಡಿದೆ.

ಕಾರುಗಳಲ್ಲಿ ಕಂಡುಬರುವ ಬ್ಯಾಟರಿ ಲಿಥಿಯಂ-ಐಯಾನ್ ಬದಲು ಲಿಥಿಯಂ ಮತ್ತು ಲೋಹದಿಂದ ಮಾಡಿದ್ದಾಗಿದೆ. ಈ ಬ್ಯಾಟರಿ ಡಿಸೈನ್ ಬಿಎಲ್‌ಟಿ ಸ್ಯಾಂಡ್‌ವಿಚ್‌ನಿಂದ ಪ್ರೇರಿತವಾಗಿದೆ. ಮೆಟಲ್ ಬ್ಯಾಟರಿಗಳಲ್ಲಿ ಡೆಂಡ್ರೈಟ್ಸ್ ಬೆಳವಣಿಗೆಯಾಗುತ್ತದೆ. ಇದರಿಂದ ಬ್ಯಾಟರಿಯ ಜೀವಿತಾವಧಿ ಕಡಿಮೆಯಾಗುತ್ತದೆ. ಆದರೆ ಲಿಥಿಯಂ ಬಳಕೆಯಿಂದ ಡೆಂಡ್ರೈಟ್ಸ್‌ಗಳು ಬೆಳೆಯುವುದಿಲ್ಲ. ಇದರಿಂದ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.

ಈ ಬ್ಯಾಟರಿಯ ಇನ್ನೊಂದು ವಿಶೇಷತೆ ಏನೆಂದರೆ ಇದು ಸ್ವಯಂ ಗುಣಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ಡಿಸೈನ್ ಹಾಗೂ ಫಾರ್ಮೇಶನ್ ಈ ಬದಲಾವಣೆಗೆ ಅನುವು ಮಾಡಿಕೊಡುತ್ತದೆ. ಡೆಂಡ್ರೈಟ್ಸ್ ಮಾಡಿದ ಕಪ್ಪು ರಂಧ್ರಗಳನ್ನು ಬ್ಯಾಟರಿ ತಂತಾನೇ ಮುಚ್ಚಿಕೊಳ್ಳುತ್ತದೆ.

ಈ ಬ್ಯಾಟರಿಯ ಜೀವಿತಾವಧಿಯಲ್ಲಿ 5-10 ಸಾವಿರದ ಬಾರಿ ಚಾರ್ಜ್ ಮಾಡಬಹುದಾಗಿದೆ, ಬೇರೆಲ್ಲಾ ಇವಿ ಬ್ಯಾಟರಿಗಳು ಜೀವಿತಾವಧಿಯಲ್ಲಿ 2-3 ಸಾವಿರ ಬಾರಿ ಚಾರ್ಜ್ ಮಾಡಬಹುದಾಗಿದೆ. ಈ ಬಗ್ಗೆ ಆಡೆನ್ ಎನರ್ಜಿ ಕಂಪನಿ ಅಧ್ಯಯನ ನಡೆಸುತ್ತಿದ್ದು, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!