Thursday, September 29, 2022

Latest Posts

ರಿಯಾಯಿತಿ ದರದಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತಕ್ಕೆ 35,000 ಕೋಟಿ ಲಾಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದರಿಂದ ಭಾರತಕ್ಕೆ 35,000 ಕೋಟಿ ರೂಪಾಯಿ ಲಾಭವಾಗಿದೆ.

ಕಳೆದ ಫೆಬ್ರವರಿಯಿಂದ ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಸಾಗಿಸಿದೆ. ಇದರಿಂದಾಗಿ ಅಮೆರಿಕದ ಜತೆಗೆ ಐರೋಪ್ಯ ರಾಷ್ಟ್ರಗಳು ರಷ್ಯಾದಿಂದ ತೈಲ ಆಮದು ನಿಷೇಧಿಸಲಾಗಿದೆ. ಇದರಿಂದಾಗಿ ರಷ್ಯಾದಲ್ಲಿ ಅಧಿಕ ತೈಲ ಕ್ರೂಢೀಕರಣವಾಗಿದ್ದು, ಭಾರತಕ್ಕೆ ಕಡಿಮೆ ಬೆಲೆಗೆ ತೈಲ ನೀಡಲು ಮುಂದಾಗಿದೆ. ಅಮತರಾಷ್ಟ್ರೀಯ ಮಟ್ಟದಿಂದ ಬಾರತ ರಷ್ಯಾದಿಂದ ತೈಲ ಖರೀಸದಂತೆ ಒತ್ತಡ ತಂದರೂ ಬಗ್ಗದ ಭಾರತ ಈ ಅವಕಾಶವನ್ನು ಬಳಸಿಕೊಂಡಿದೆ. ಹಿಂದೆಂದಿಗಿಂತಲೂ ಹೆಚ್ಚು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿಸಿದ್ದೇ ತಡ ದೇಶೀಯ ತೈಲ ಕಂಪನಿಗಳು ಅದನ್ನು ಸಂಸ್ಕರಿಸಿ ವಿದೇಶಗಳಿಗೆ ಮಾರಾಟ ಮಾಡಲು ಶುರು ಮಾಡಿದವು. ಇದನ್ನರಿತ ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತು ಮಾಡುವ ತೈಲಗಳಿಗೆ ವಿಂಡ್‌ಫಾಲ್‌ ತೆರಿಗೆ ಹೆಚ್ಚಿಸಿತು. ಈ ತೆರಿಗೆಯಿಂದಲೂ ಸಹ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬಂದಿದೆ.

ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ಈ ಹಿಂದೆ ನಮ್ಮ ತೈಲ ಅಗತ್ಯತೆಗಳಲ್ಲಿ ಕೇವಲ ಒಂದು ಪ್ರತಿಶತ ಮಾತ್ರ ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದೀಗ ನಾವು ರಷ್ಯಾದಿಂದ ಶೇಕಡಾ 12 ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. ಈ ವರ್ಷ ಏಪ್ರಿಲ್‌-ಜುಲೈನಲ್ಲಿ ಭಾರತವು 11.2 ಬಿಲಿಯನ್‌ ಮೊತ್ತದ ಮಿನರಲ್‌ ಆಯಿಲ್‌ ಅನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1.3 ಬಿಲಿಯನ್‌ ಮೊತ್ತದ ಮಿನರಲ್‌ ಆಯಿಲ್‌ ಆಮದು ಮಾಡಿಕೊಂಡಿತ್ತು. ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಇದು 12 ಬಿಲಿಯನ್‌ಗೆ ಏರಿಕೆಯಾಗಿದೆ. ಭಾರತ ಪ್ರಸ್ತುತ ರಷ್ಯಾದ ಎರಡನೇ ಅತಿದೊಡ್ಡ ತೈಲ ಆಮದುದಾರನಾಗಿ ಹೊರಹೊಮ್ಮಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!