August 25, 2026
Tuesday, August 25, 2026
spot_img

ಎಕ್ಸ್ಪೈರಿ ಡೇಟ್‌ ಆಗೋಗಿದೆ ಎಂದು ರಸ್ತೆಬದಿಯಲ್ಲಿ ಚಾಕೋಲೆಟ್‌ ಡಬ್ಬಿ ಎಸೆದ ಕಂಪನಿ : ಬ್ಯಾಗ್‌ ತುಂಬಾ ತುಂಬಿಸಿಕೊಂಡು ಹೋದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಜನರಿಗೆ ಏನೇ ಆಗಲಿ ಫ್ರೀಯಾಗಿ ಸಿಗುತ್ತದೆ ಅಂದ್ರೆ ಸಿಕ್ಕಾಪಟ್ಟೆ ಖುಷಿಯಾಗಿಬಿಡ್ತಾರೆ. ಉಚಿತ ಅನ್ನೋ ಪದ ಕೇಳುತ್ತಿದ್ದಂತೆಯೇ ಎದ್ದೆನೋ ಬಿದ್ದೆನೋ ಎಂಬಂತೆ ಓಡಿ ಅಳತೆಗೂ ಮೀರಿದಷ್ಟು ಬಾಚಿಕೊಂಡು ಬಿಡುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತಹ ಘಟನೆಯೊಂದು ಖಾನ್‌ಪುರದಲ್ಲಿ ನಡೆದಿದೆ.

ಖಾನ್‌ಪುರದ ಫ್ಯಾಕ್ಟರಿಯೊಂದರಲ್ಲಿ ಅವಧಿ ಮೀರಿದ ಚಾಕೋಲೆಟ್‌ಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿತ್ತು. ಬಾಯಿಂದ ಬಾಯಿಗೆ ಚಾಕೋಲೆಟ್‌ ಎಸೆದಿರುವ ಸುದ್ದಿ ಹರಡಿದ್ದು, ಜನ ಗಾಡಿಗಳಲ್ಲಿ ಬಂದು ಸಿಕ್ಕಸಿಕ್ಕಷ್ಟು ಚಾಕೋಲೆಟ್‌ಗಳನ್ನು ತುಂಬಿಸಿಕೊಂಡು ಮನೆಗೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಅವಧಿ ಮೀರಿದ್ದು ಎಂದರೆ ಜನರಿಗೆ ಅರ್ಥ ಗೊತ್ತಿದ್ಯೋ ಇಲ್ಲವೋ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಎಲ್ಲೇ ಏನೇ ಫ್ರಿಯಾಗಿ ಕೊಡ್ತಿದ್ದಾರೆ ಎಂದ ಮಾತ್ರಕ್ಕೆ ಅದನ್ನು ತೆಗೆದುಕೊಂಡು ಹೋಗಲೇಬೇಕು ಅಥವಾ ತೆಗೆದುಕೊಳ್ಳದಿದ್ದಕ್ಕೆ ಪಶ್ಚಾತ್ತಾಪ ಪಡುವ ಅಗತ್ಯವೇ ಇಲ್ಲ. ಆದರೆ ಜನರ ಅತಿಯಾಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಕ್ಸ್‌ಪೈರಿ ಡೇಟ್‌ ಆಗಿರುವ ಚಾಕೋಲೆಟ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ತಮ್ಮ ಸ್ವಂತದ ಅಂಗಡಿಗಳಲ್ಲಿ ಇಟ್ಟುಕೊಂಡು ಮಾರಬಹುದು, ಅಂಗಡಿಗಳಿಗೆ ಮಾರಾಟ ಮಾಡಬಹುದು ಅಥವಾ ತಮ್ಮ ಮಕ್ಕಳಿಗೂ ನೀಡುವ ಸಾಧ್ಯತೆ ಇದೆ. ಜನರಿಗೆ ಕಾಮನ್‌ ಸೆನ್ಸ್‌ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಬರೋಕೆ ಎಷ್ಟು ಕಾಲ ಬೇಕಾಗುತ್ತದೋ ಯಾರಿಗೂ ಗೊತ್ತಿಲ್ಲ!!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !