ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲು ಪೈಪೋಟಿ: ಖರ್ಗೆ ಯಾವ ಬದಲಾವಣೆಯನ್ನೂ ತರೋದಿಲ್ಲ ಎಂದ ಶಶಿ ತರೂರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸಂಸದ ಶಶಿ ತರೂರ್ ಎದುರಾಳಿಯಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಇಬ್ಬರು ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ.

ಅಕ್ಟೋಬರ್ 8 ವರೆಗೆ ನಾಮಪತ್ರ ಹಿಂಪಡೆಯುವ ಅವಕಾಶವಿದ್ದು, ಆದರೆ ಸದ್ಯ ಇಬ್ಬರು ಚುನಾವಣೆಗೆ ನಿಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಈ ನಡುವೆ ಶಶಿ ತರೂರ್‌ ತಮ್ಮನ್ನು ಬೆಂಬಲಿಸುವವರಿಗೆ ಯಾವುದೇ ದ್ರೋಹ ಬಗೆಯುವುದಿಲ್ಲ. ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಖರ್ಗೆ ಅವರು ರಬ್ಬರ್‌ ಸ್ಟಾಂಪ್‌ ಅಧ್ಯಕ್ಷರಾಗಿರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ ತರೂರ್‌, ಖರ್ಗೆ ಅವರಂಥ ನಾಯಕನಿಂದ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ. ಇದು ನಮ್ಮ ಪಕ್ಷದ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಮುಖ 3 ನಾಯಕರಲ್ಲಿ ಖರ್ಗೆ ಕೂಡ ಒಬ್ಬರು. ಅವರಂತಹ ನಾಯಕರಿಂದ ಬದಲಾವಣೆ ತರಲು ಸಾಧ್ಯವಿಲ್ಲ, ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸುತ್ತಾರೆ. ಆದರೆ, ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುತ್ತೇನೆ ಎಂದು ಹೇಳಿದ್ದಾರೆ.

ದೊಡ್ಡ ನಾಯಕರು ಸ್ವಾಭಾವಿಕವಾಗಿ ಇತರ ದೊಡ್ಡ ನಾಯಕ ಬೆಂಬಲಕ್ಕೆ ನಿಲ್ಲುತ್ತಾರೆ, ಆದರೆ ತಮಗೆ ರಾಜ್ಯಗಳ ಪಕ್ಷದ ಕಾರ್ಯಕರ್ತರ ಬೆಂಬಲವಿದೆ ಎಂದು ಹೇಳಿದರು.
ದೊಡ್ಡ ನಾಯಕರಿಗೆ ಗೌರವ ಕೊಡುತ್ತೇವೆ ಆದರೆ ಪಕ್ಷದಲ್ಲಿ ಯುವಕರ ಮಾತು ಕೇಳುವ ಕಾಲ ಬಂದಿದೆ. ಪಕ್ಷದ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ನಾವು ಕೆಲಸ ಮಾಡುತ್ತೇವೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಈ ಪ್ರಾಮುಖ್ಯತೆ ನೀಡಬೇಕು ಎಂದರು.

ಮೂಲ ತತ್ವಗಳನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನ
ಮತ್ತೊಂದೆಡೆ ಭಾನುವಾರವೇ ಪತ್ರಿಕಾಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ‘ಒಬ್ಬ ವ್ಯಕ್ತಿ ಒಂದೇ ಹುದ್ದೆ’ ಸೂತ್ರದಡಿ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ 50 ವರ್ಷಗಳ ರಾಜಕೀಯ ಜೀವನದ ಬಗ್ಗೆ ನಿಮಗೆ ತಿಳಿದಿದೆ. ನಾನು ಬಾಲ್ಯದಿಂದಲೂ ಇಲ್ಲಿಯವರೆಗೆ ತತ್ವ ಮತ್ತು ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ. ಬಾಲ್ಯದಿಂದಲೂ ನನ್ನ ಜೀವನದಲ್ಲಿ ಹೋರಾಟವಿದೆ. ವರ್ಷಗಟ್ಟಲೆ ಸಚಿವನಾಗಿದ್ದ ನಾನು ವಿರೋಧ ಪಕ್ಷದ ನಾಯಕನೂ ಆಗಿದ್ದೆ. ಸದನದಲ್ಲಿ ಬಿಜೆಪಿ ಮತ್ತು ಸಂಘದ ಸಿದ್ಧಾಂತದ ವಿರುದ್ಧ ಹೋರಾಟ ಮಾಡಿದ್ಧೇನೆ. ನಾನು ಮತ್ತೆ ಹೋರಾಡಲು ಬಯಸುತ್ತೇನೆ ಮತ್ತು ಹೋರಾಟದ ಮೂಲಕ ತತ್ವಗಳನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!