ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಮೊನ್ನೆಯಷ್ಟೇ ಒಟ್ಟಾಗಿ ಕಾಣಿಸಿಕೊಂಡಿದ್ದ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿ ರಾಜ್ಕುಂದ್ರಾ ಟ್ವೀಟ್ ಮಾಡಿದ್ದು, ನಾವು ದೂರ ಆಗಿದ್ದೇವೆ, ನಮಗೆ ಇದು ಅತ್ಯಂತ ಕಷ್ಟದ ಸಮಯ, ಸ್ವಲ್ಪ ಕಾಲಾವಕಾಶ ನೀಡಿ ಎಂದು ಹಾರ್ಟ್ ಬ್ರೇಕ್ ಆಗಿರುವ ಇಮೋಜಿ ಹಾಕಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ ಕುಂದ್ರಾ ಬಯೋಪಿಕ್ ಯುಟಿ 69 ರಿಲೀಸ್ ಆಗುತ್ತಿದೆ, ಸಿನಿಮಾ ಪ್ರಮೋಷನ್ಗಾಗಿ ಮಾಡಿದ ಗಿಮಿಕ್ ಇರಬಹುದು ಅಥವಾ ಮದ್ಯದ ನಶೆಯಲ್ಲಿ ಮಾಡಿದ ಟ್ವೀಟ್ ಕೂಡ ಆಗಿರಬಹುದು ಎಂದು ನೆಟ್ಟಿಗರು ಹೇಳ್ತಿದ್ದಾರೆ.