ಮಾರ್ಚ್ ಅಂತ್ಯದೊಳಗೆ ನಗರೋತ್ಥಾನ ವಿವಿಧ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಚರಂತಿಮಠ

ಹೊಸದಿಗಂತ ವರದಿ ಬಾಗಲಕೋಟೆ:

ಇಂದು ಬಾಗಲಕೋಟೆ ನಗರದ ಸರದಾರ ವಲ್ಲಭಭಾಯಿ ಚೌಕನಲ್ಲಿ ಬಾಗಲಕೋಟೆ ಜಿಲ್ಲಾ ನಗರಾಭಿವೃದ್ಧಿಕೋಶ ಹಾಗೂ ನಗರ ಸಭೆ ಕಾರ್ಯಾಲಯ ಬಾಗಲಕೋಟೆ ಇವರ ಸಹಯೋಗದಲ್ಲಿ ಅಂದಾಜು 12 ಕೋಟಿ 50 ಲಕ್ಷ ರೂ.ಗಳ ನಗರೋತ್ಥಾನ 3ನೇ ಹಂತ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4 ಹಂತ ಹಾಗೂ 15 ನೇ ಹಣಕಾಸು ಯೋಜನೆ, ಯೋಜನೆಗಳ ವಿವಿಧ ಕಾಮಗಾರಿಗಳ ಭೂಮಿ ಪೂಜೆಯನ್ನು ಶಾಸಕ ವೀರಣ್ಣ ಚರಂತಿಮಠ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರಾದ ಡಾ. ವೀರಣ್ಣ ಚರಂತಿಮಠ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ನಡುವೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನದ ವಿವಿಧ ಹಂತದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದೆ. ಆದ್ದರಿಂದ ಅಧಿಕಾರಿಗಳು ಬರುವ ಮಾರ್ಚ್ ದೊಳಗಾಗಿ ಎಲ್ಲ ಕಾಮಗಾರಿಗಳು ಮುಗಿಸಬೇಕು. ಜನರ ಅನುಕೂಲಕ್ಕೆಪೂರಕವಾದ ಅಭಿವೃದ್ಧಿ ಕಾರ್ಯಚಟುವಟಿಕೆಗಳು ನಡೆಯಬೇಕು. ನಮಗೆ ಜನರ ಹಿತದೃಷ್ಠಿಗಾಗಿ ನಗರ ಅಭಿವೃದ್ಧಿ ಮುಖ್ಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರೀಷತ್ ಸದಸ್ಯರಾದ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷರಾದ ಜಿ. ಎನ್ ಪಾಟೀಲ, ಬುಡಾ ಅಧ್ಯಕ್ಷರಾದ ಬಸಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷರಾದ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷರಾದ ನಾಗರಾಜ ಅವರಾದಿ, ನಗರಸಭೆ ಸ್ಥಾಯಿ ಚೇರಮನ್ ರಾದ ಅಂಬಾಜಿ ಜೋಶ, ಬಿಟಿಡಿಎ ಸದಸ್ಯರಾದ ಶಿವಾನಂದ ಟವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ್. ಇಂಡಿಯನ್ ಆಯಿಲ್ ಕಾಪೋರೇಷನ್ ಸದಸ್ಯರಾದ ರಾಜು ರೇವಣಕರ್, ನಗರಸಭೆ ಸದಸ್ಯರುಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!