ಹೊಸದಿಗಂತ ವರದಿ, ಶಿರಸಿ:
ಕಡ್ಡಾಯ ಶಿಕ್ಷಣ ಹಾಗೂ ಸಮಾನತೆಯ ಉದ್ದೇಶದೊಂದಿಗೆ ದೇಶದ ವಿವಿಧ ರಾಜ್ಯಗಳಿಗೆ ಸೈಕಲ್ ಯಾತ್ರೆ ನಡೆಸುತ್ತಿರುವ ಬಿಜೆಪಿ ಯುವ ಮೋರ್ಚಾ ಬೆಂಗಳೂರು ಘಟಕದ ಪದಾಧಿಕಾರಿಗಳಾದ ಧನುಷ್ ಮತ್ತು ಹೇಮಂತ್ ಶಿರಸಿಗೆ ಆಗಮಿಸಿ ಪ್ರಸಿದ್ಧ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು.
ಶಿರಸಿಗೆ ಆಗಮಿಸಿದ ಯಾತ್ರಿಕರನ್ನು ಶಿರಸಿ ನಗರ ಯುವ ಮೋರ್ಛಾ ಅಧ್ಯಕ್ಷ ನಾಗರಾಜ ನಾಯ್ಕ ಜಿಲ್ಲಾ ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ವಿಶಾಲ ಮರಾಠೆ ಮೊದಲಾದವರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಧನುಷ್ ಅವರು ಮಾತನಾಡಿ ರಾಷ್ಟ್ರೀಯ ಯುವ ಮೋರ್ಛಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ಮಾರ್ಗದರ್ಶನದಲ್ಲಿ ಭಾರತದ 23 ರಾಜ್ಯಗಳಿಗೆ ಸೈಕಲ್ ಯಾತ್ರೆ ಮೂಲಕ ತೆರಳಿ ಕಡ್ಡಾಯ ಶಿಕ್ಷಣ ಮತ್ತು ಸಮಾನತೆಯ ಸಂದೇಶ ಸಾರಿದ್ದೇವೆ 5 ರಾಜ್ಯಗಳ ಮುಖ್ಯಮಂತ್ರಿಗಳನ್ನು ಎರಡು ರಾಜ್ಯಗಳ ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ ಎಲ್ಲಡೆಯಲ್ಲೂ ಸೈಕಲ್ ಯಾತ್ರೆಯ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿರಸಿ ನಗರ ಮತ್ತು ಗ್ರಾಮೀಣ ಯುವ ಮೋರ್ಛಾ ಪದಾಧಿಕಾರಿಗಳು ಉಪಸ್ಥಿತರಿದ್ದರು.