ಲಾಕ್‌ಡೌನ್ , ಸೆಮಿ ಲಾಕ್‌ಡೌನ್ ಬಗ್ಗೆ ತಜ್ಞರ ಸಭೆಯ ನಂತರ ತೀರ್ಮಾನ : ಸಿಎಂ ಬೊಮ್ಮಾಯಿ

ದಿಗಂತ ವರದಿ ಕಲಬುರಗಿ:

ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೋರೋನಾ ಮತ್ತು ಓಮಿಕ್ರಾನ ವರದಿಗಳು ಹೆಚ್ಚಾಗುತ್ತಿದ್ದು,ಬರವಂತಹ ದಿನಗಳಲ್ಲಿ ತಜ್ಞರ ಜೊತೆಗೆ ನಡೆಯುವ ಸಭೆಯ ಬಳಿಕವೇ ಲಾಕ್ ಡೌನ ಮತ್ತು ಸೆಮಿ ಲಾಕ್ ಡೌನ್ ಬಗ್ಗೆ ಅಂತಿಮವಾಗಿ ತೀಮಾ೯ನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಇಂದು ಸಾಯಂಕಾಲ ಕೋವಿಡ ಬಗ್ಗೆ ಸಭೆ ಮಾಡಲಿದ್ದೆವೆ. ಟಾಸ್ಕ ಪೋಸ೯ ಕಮಿಟಿ ಸದಸ್ಯರು ಇರಲಿದ್ದಾರೆ ಎಂದು ತಿಳಿಸಿದರು.

ಕೋರೋನಾ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರಕಾರ ಅನೇಕ ಮಾಗ೯ದಶ೯ನ ನೀಡಿದೆ.ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಾಗಿದೆ.ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ ವಹಿಸಿ, ಗಡಿಗಳನ್ನು ಬಿಗಿ ಮಾಡಲಾಗಿದೆ ಎಂದರು.

ಔಷದಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ರಾಜ್ಯದಲ್ಲಿ ಶಾಲೆಗಳ ರಜೆಯ ಬಗ್ಗೆ ಉನ್ನತ ಮಟ್ಟದ ತಜ್ಞರ ಜೊತೆಗೆ ಮಾತಾಡಿ,ಅವರು ಎನೂ ಹೇಳುತ್ತಾರೆಯೋ,ಕೇಳಿ ತಿಮಾ೯ನ ಮಾಡಲಾಗುವುದು ಎಂದರು.

ಈ ಸಮಯದಲ್ಲಿ ಜನರ ಸಹಕಾರ ಕೂಡಾ ಅಗತ್ಯ ಇದೆ.ಜನ ಸಹಕಾರ ನೀಡಿದರೇ,ಕೋವಿಡ ನಿಯಂತ್ರಣ ಮಾಡಬಹುದು. ಗಡಿಯಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದರು.

ರಾಮನಗರ ಜಿಲ್ಲೆಯಲ್ಲಿ ವೇದಿಕೆ ಮೇಲೆ ಡಿ.ಕೆ.ಸುರೇಶ್, ಅಶ್ವಥ್ ನಾರಾಯಣ ಗಲಾಟೆ ಬಗ್ಗೆ ಮಾತನಾಡಿದ ಅವರು,ಇದು ಕನಾ೯ಟಕದ ಸಂಸ್ಕೃತಿ ಅಲ್ಲಾ,ಮಾತಿನಿಂದ ನಮ್ಮ ವಿಚಾರವನ್ನು ಹೇಳಬಹುದು ಎಂದರು. ಆದರೆ ಈ ರೀತಿ ವತ೯ನೆ ಸರಿಯಾಗಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!