ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈಯಿಂದ ಹಾರಬೇಕಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳಿಗೆ, ವಿಸ್ತಾರಾ ಮತ್ತು ಇಂಡಿಗೋದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ.
ಬುಧವಾರ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಆಕಾಶ ಏರ್ ನ ಏಳು ವಿಮಾನಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿತ್ತು. ಇದಕ್ಕೂ ಮೊದಲು, ಸೋಮವಾರ ಮತ್ತು ಮಂಗಳವಾರದಂದು ಭಾರತೀಯ ವಿಮಾನಯಾನ ಸಂಸ್ಥೆಗಳ ಸುಮಾರು ಒಂದು ಡಜನ್ ವಿಮಾನಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು.
ಇದೀಗ ಗುರುವಾರ, ಬೋಯಿಂಗ್ 787 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ 147 ಜನರೊಂದಿಗೆ ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನ ಫ್ರಾಂಕ್‌ಫರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು ಎಂದು ಏರ್‌ಲೈನ್ಸ್ ತಿಳಿಸಿದೆ.
ಅದೇ ಸಮಯದಲ್ಲಿ, ಟರ್ಕಿಯ ಇಸ್ತಾನ್‌ಬುಲ್‌ನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿತ್ತು ಮತ್ತು ಸಮಗ್ರ ಭದ್ರತಾ ತಪಾಸಣೆಯನ್ನು ಕೈಗೊಳ್ಳಲು ಭದ್ರತಾ ಸಂಸ್ಥೆಗಳು ಇಲ್ಲಿನ ಪ್ರತ್ಯೇಕ ಸ್ಥಳಕ್ಕೆ ವಿಮಾನ ತೆಗೆದುಕೊಂಡು ಹೋಗಲಾಯಿತು.
ಅಕ್ಟೋಬರ್ 16, 2024 ರಂದು ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ಫ್ಲೈಟ್ UK 028ಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆ ಬಂದಿತ್ತು ಎಂದು ಏರ್‌ಲೈನ್ಸ್ ಹೇಳಿದೆ.
ಪ್ರೋಟೋಕಾಲ್ ಪ್ರಕಾರ, ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ತಿಳಿಸಲಾಯಿತು, ವಿಮಾನವನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ವಿಸ್ತಾರ ಏರ್ ಲೈನ್ಸ್ ತಿಳಿಸಿದೆ.