Monday, September 26, 2022

Latest Posts

ಗಾಯಾಳು ಮಹಿಳೆ ತಲೆಗೆ ಕಾಂಡೋಮ್‌ ಪ್ಯಾಕ್‌ ಇಟ್ಟು ಬ್ಯಾಂಡೇಜ್‌: ಮಧ್ಯಪ್ರದೇಶದಲ್ಲೊಂದು ವಿಲಕ್ಷಣ ಘಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ತಲೆಗೆ ಪೆಟ್ಟು ಮಾಡಿಕೊಂಡು ಚಿಕಿತ್ಸೆಗೆ ಬಂದಿದ್ದ ಮಹಿಳೆಯೊಬ್ಬರ ಗಾಯದ ಮೇಲೆ ಕಾಂಡೋಮ್‌ ಕವರ್‌ ಇರಿಸಿ ಬ್ಯಾಂಡೇಜ್ ಹಾಕಿದ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿರುವ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಮಹಿಳೆ ರೇಶ್ಮಾ ಭಾಯಿ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬಂದಿದ್ದರು. ಅವರ ತಲೆಗೆ ಆಗಿದ್ದ ಗಾಯದಿಂದಾಗುತ್ತಿದ್ದ ರಕ್ತಸ್ರಾವವನ್ನು ನಿಲ್ಲಿಸಲು ಕಾಂಡೋಮ್ ಕವರ್‌ ಅನ್ನು ಇರಿಸಿ ಮಹಿಳೆಯ ತಲೆಗೆ ತಾತ್ಕಾಲಿಕ ಬ್ಯಾಂಡೇಜ್ ರೂಪದಲ್ಲಿ ಹತ್ತಿಯೊಂದಿಗೆ ಕಟ್ಟಲಾಗಿದೆ. ವೈದ್ಯಾಧಿಕಾರಿ ಡಾ ಧರ್ಮೇಂದ್ರ ರಜಪೂತ್ ತುರ್ತು ಕರ್ತವ್ಯದಲ್ಲಿದ್ದುದರಿಂದ ಮತ್ತು ವಾರ್ಡ್ ಬಾಯ್ ಅನಂತ್ ರಾಮ್ ಗೆ ಬ್ಯಾಂಡೇಜ್‌ ಹಾಕುವಂತೆ ಸೂಚಿಸಿದ್ದರು.
ಆದರೆ ಆತ ಕಾಂಡೋಮ್ ಪ್ಯಾಕೆಟ್ ಇಟ್ಟು ಬ್ಯಾಂಡೇಜ್‌ ಹಾಕಿದ್ದಾನೆ ಎಂದು ಆಸ್ಪತ್ರೆಯ ಸಿಎಂಎಚ್‌ಒ ಡಾ. ರಾಕೇಶ್ ಮಿಶ್ರಾ ಹೇಳಿದ್ದಾರೆ. ಮಹಿಳೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬಂದಾಗ ವಿಚಾರ ಬೆಳಕಿಗೆಬಂದಿದೆ. ಬೇಜವಾಬ್ದಾರಿ ತನ ತೋರಿದ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದ ವಾರ್ಡ್‌ ಬಾಯ್‌ ಅನ್ನು ಅಮಾನತುಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!