ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ತನ್ನ ಗುಪ್ತಾಂಗವನ್ನು ತೋರಿಸಿ ವಿಕೃತಿ ಮೆರೆದ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ನಿವಾಸಿ ಕಂಡಕ್ಟರ್ ಇರ್ಫಾನ್ ಬಂಧಿತ ಆರೋಪಿ.ಈತ ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ.
ಜುಲೈ 9 ರ ಗುರುವಾರ ಸಂಜೆ ಸುಮಾರು 5ಗಂಟೆಗೆ ಮಂಗಳೂರು-ವಿಟ್ಲ ನಡುವೆ ಸಂಚರಿಸುವಾಗ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿಯರ ಮುಂದೆ ನಿಂತುಕೊಂಡು ಈತ ತನ್ನ ಗುಪ್ತಾಂಗವನ್ನು ತೋರಿಸಿದ್ದಾನೆ. ಜೊತೆ ಅಸಹ್ಯಕರ ಸನ್ನೆಗಳನ್ನು ಮಾಡಿದ್ದಾನೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಬಸ್‌ನ ಹಿಂಬದಿ ಸೀಟ್‌ಗೆ ಬನ್ನಿ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ. ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಮುಕ ಕಂಡಕ್ಟರ್‌ನನ್ನ ಬಂಧಿಸಿದ್ದಾರೆ.



