ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನಕ್ಕೆ ಒಂದರ ಮೇಲೊಂದು ಹೊಡೆತ ಬೀಳುತ್ತಿದ್ದು, ಆರ್ಥಿಕವಾಗಿ ಭಾರೀ ದೊಡ್ಡ ಹೊಡೆತ ಬಿದ್ದಿದೆ. ಇದರ ನಡುವೆ ಮೂಡೀಸ್ ಎನ್ನುವ ರೇಟಿಂಗ್ ಏಜೆನ್ಸಿ, ಭಾರತದೊಂದಿಗೆ ಇದೇ ರೀತಿಯಲ್ಲಿ ಸಂಘರ್ಷಮಯ ವಾತಾವರಣ ಮುಂದುವರಿದಲ್ಲಿ ಪಾಕಿಸ್ತಾನದ ದುರ್ಬಲ ಆರ್ಥಿಕತೆ ಚೆಲ್ಲಾಪಿಲ್ಲಿ ಆಗಲಿದೆ ಎಂದು ತಿಳಿಸಿದೆ .
ಇತ್ತೀಚಿನ ರಾಜತಾಂತ್ರಿಕ ಮತ್ತು ಭದ್ರತಾ ವಿದ್ಯಮಾನಗಳು ಪಾಕಿಸ್ತಾನದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಹಾಳುಗೆಡವುವ ಅಪಾಯ ಇದೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ನ ವರದಿಯಲ್ಲಿ ಹೇಳಿದೆ.
ಭಾರತದೊಂದಿಗೆ ಸಂಘರ್ಷವನ್ನು ಮುಂದುವರಿಸಿದರೆ, ಪಾಕಿಸ್ತಾನದ ಹಣಕಾಸು ಚೇತರಿಕೆಗೆ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ವ್ಯರ್ಥವಾಗಬಹುದು. ಸ್ಥೂಲ ಆರ್ಥಿಕ ಸ್ಥಿರತೆ ಸಾಧಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು ಎಂದು ಮೂಡೀಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಇತ್ತೀಚೆಗಷ್ಟೇ ಚೇತರಿಕೆ ಕಾಣುತ್ತಿರುವ ಪಾಕ್ ಗೆ ಐಎಂಎಫ್ನಿಂದ ಸಾಲ ಸಿಕ್ಕ ಬಳಿಕ ಒಂದಷ್ಟು ಚೇತರಿಕೆ ಸಾಧ್ಯವಾಗಿದೆ. ಇತ್ತ ಭಾರತದ ಜೊತೆಗೆ ಕಿತಾಪತಿ ಮಾಡಿಕೊಂಡು ಇದ್ದರೆ ಹೊರಗಿನಿಂದ ಮತ್ತೆ ದೊಡ್ಡ ಸಾಲ ಸಿಗುವುದು ಕಷ್ಟ. ಕಂತುಗಳನ್ನು ಕಟ್ಟಬೇಕಾದರೆ ಮತ್ತೆ ಹೊಸ ಬಾಹ್ಯ ಸಾಲಗಳು ಅಗತ್ಯ ಇವೆ. ಹೊರಗಿನಿಂದ ಸಾಲ ಸಿಗದೇ ಹೋದರೆ ಪಾಕಿಸ್ತಾನವು ಸಾಲದ ಕಂತು ಕಟ್ಟಲು ಆಗದೇ ಹೋಗಬಹುದು. ಹಾಗೇನಾದರೂ ಆದರೆ ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂಟು ತಿಳಿಸಿದೆ