ಹೊಸದಿಗಂತ ಡಿಜಿಟಲ್ ಡೆಸ್ಕ್:
IPL 2025ನೇ ಸಾಲಿನ ಲೀಗ್ ಪಂದ್ಯಾವಳಿಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ನಡುವೆ ಐಪಿಎಲ್ ಆಯೋಜಕರು 2008 ರಿಂದ 2025 ರವರೆಗೆ ಎಲ್ಲಾ 18 ಸೀಸನ್ ಆಡಿರುವ ಆಟಗಾರರನ್ನು ಸನ್ಮಾನಿಸಿದೆ.
ಐಪಿಎಲ್ 2008ನೇ ಆವೃತ್ತಿಯಿಂದಲೂ ಎಂ ಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಆಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಮೂವರು ಲೆಜಂಡ್ ಆಟಗಾರರನ್ನು ಬಿಸಿಸಿಐ ಅಭಿನಂದಿಸಿದೆ. ಆದರೆ ಈ ಸಾಲಿನಲ್ಲಿ ಇರುವ ಕರ್ನಾಟಕ ಮೂಲದ ಸ್ಟಾರ್ ಬ್ಯಾಟ್ಸಮನ್ ಹಾಗೂ ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿರುವ ಮನೀಶ್ ಪಾಂಡೆ ಅವರನ್ನು ಬಿಸಿಸಿಐ ಕಡೆಗಣಿಸಿದೆ ಎಂದು ಆರೊಪಿಸಲಾಗಿದೆ.
ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಮನೀಶ್ ಪಾಂಡೆ ಐಪಿಎಲ್‌ನ ಎರಡನೇ ಸೀಸನ್ 2009 ರಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದರು. ಆ ಋತುವಿನಲ್ಲಿ ಆರ್‌ಸಿಬಿ ಪರ ಆಡುವಾಗ, ಮನೀಶ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ 114 ರನ್‌ಗಳ ಅದ್ಭುತ ಶತಕ ಗಳಿಸಿದರು.
ಐಪಿಎಲ್ ನಲ್ಲಿ 18 ವರ್ಷ ಆಡಿರುವ ಕನ್ನಡಿಗ ಮನೀಶ್ ಪಾಂಡೆ 7 ತಂಡಗಳ ಪರ ಆಡಿ ಇಲ್ಲಿಯವರೆಗೆ 172 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 160 ಇನ್ನಿಂಗ್ಸ್‌ಗಳಲ್ಲಿ 1 ಶತಕ ಸೇರಿದಂತೆ ಬರೋಬ್ಬರಿ 3869 ರನ್‌ಗಳನ್ನು ಗಳಿಸಿದ್ದಾರೆ.
ಕ್ರಿಕೆಟ್‌ನ ನಿಯಮಗಳ ಪ್ರಕಾರ ಎಲ್ಲಾ ಆಟಗಾರರೂ ಒಂದೇ ಆಗಿರುವಾಗ ಪ್ರತಿಯೊಬ್ಬ ಆಟಗಾರನ ಸಮಾನ ಪ್ರದರ್ಶನಕ್ಕೆ ಸಮಾನ ಗೌರವ ನೀಡಬೇಕು. ಧೋನಿ, ರೋಹಿತ್ ಮತ್ತು ವಿರಾಟ್‌ಗೆ ಸಿಕ್ಕ ಗೌರವ ಇವರಿಗೆ ಸಿಗಲಿಲ್ಲ ಎಂದು ಅಭಿಮಾನಿಗಳಲ್ಲಿ ಬೇಸರವಿರೋದಂತು ಸತ್ಯ.