ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ನೂತನ ಎಇಒ ಹೆಸರಲ್ಲಿ ಗೊಂದಲ: ಸ್ಪಷ್ಟನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೂತನವಾಗಿ ನೇಮಕಗೊಂಡಿದ್ದಾರೆ.

ಇದರ ಬೆನ್ನಲ್ಲೇ ಅಧಿಕಾರಿ ಯೇಸುರಾಜ್ ಅವರ ಹೆಸರನ್ನು ನೋಡಿ, ಅವರು ಕ್ರೈಸ್ತ ಧರ್ಮದವರು ಎಂಬ ವಂದತಿಗಳು ಸಾಮಾಜಿಕ ಜಾಲತಾಣದದಲ್ಲಿ ಹರಿದಾಡಿದ್ದವು . ಇದರ ಬೆನ್ನಿಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ .

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಯೇಸುರಾಜ್ ಅವರು ಹಿಂದು ಧರ್ಮದವರು ಎಂಬುದಾಗಿ ತಿಳಿಸಿದ್ದಾರೆ. ಯೇಸುರಾಜ್ ಅವರ ಶಾಲಾ ವರ್ಗಾವಣೆ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಧಿಕಾರಿ ಯೇಸುರಾಜ್ ಅವರು ಮೂಲತಃ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನವರು ಮತ್ತು ಪರಿಶಿಷ್ಟ ಜಾತಿ (ಆದಿ ಕರ್ನಾಟಕ) ಯವರು ಎಂದು ತಿಳಿದು ಬಂದಿದೆ. ಈ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!