ದುಬೈಯಲ್ಲಿ ಮತ್ತೆ ಭಾರೀ ಮಳೆ: ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅರಬ್‌ ಸಂಯುಕ್ತ ಸಂಸ್ಥಾನ (UAE)ದಲ್ಲಿ ಎರಡು ವಾರಗಳ ನಂತರ ಮತ್ತೆ ಭಾರೀ ಮಳೆ ಸುರಿಯುತ್ತಿದೆ. ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ರದ್ದಾಗಿದೆ.

ಕಳೆದ ತಿಂಗಳು ದೇಶಕ್ಕೆ ಅಪ್ಪಳಿಸಿದ ಅಭೂತಪೂರ್ವ ಮಳೆಗಿಂತ ಈ ಮಳೆಯು ಕಡಿಮೆ ತೀವ್ರತೆಯಿಂದ ಕೂಡಿರಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. 1949 ರ ಬಳಿಕ ದುಬೈನಲ್ಲಿ ದಾಖಲೆಯ ಮಳೆಯಾಗಿದೆ.

ಯುಎಇಯಾದ್ಯಂತ ಹವಾಮಾನ ವೈಪರೀತ್ಯವಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಪ್ರಮುಖ ನಗರಗಳಾದ್ಯಂತ ಭಾರೀ ಗಾಳಿ ಬೀಸುವುದರೊಂದಿಗೆ ಲಘು ಮಳೆ ಬೀಳುತ್ತಿದೆ. ಗುರುವಾರ ಮತ್ತು ಶುಕ್ರವಾರದಂದು ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ರಿಮೋಟ್ ವರ್ಕ್ ಸಿಸ್ಟಮ್‌ಗೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!