ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಗೊಂದಲ: ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶಾಲಾ ಹಾಗೂ ಕಾಲೇಜು ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಉಂಟಾಗಿರುವ ಗೊಂದಲ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದು, ನಮ್ಮ ಸರ್ಕಾರದ ಕೆಲಸಗಳನ್ನು ಸಹಿಸಿಕೊಳ್ಳದೇ ಅನಾವಶ್ಯಕವಾಗಿ ಸುಳ್ಳು ಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.

ಕಳೆದ ವರ್ಷ ಹಲವರು ಕಾರಣಗಳಿಂದ ಶಾಲೆ ಆರಂಭವಾಗಲ್ಲ ಎಂದಿದ್ದರು. ಶಾಲೆ ಪ್ರಾರಂಭ ಎಂದಾಗಲೂ ಕೋವಿಡ್ ನೆಪ ಹೇಳಿದ್ದರು. ಬಡವರ ಪ್ರಾಣದ ಜತೆ ಚೆಲ್ಲಾಟ ಎಂದಿದ್ದರು. ಶಾಲೆಯಲ್ಲಿನ ಬಡ ವಿದ್ಯಾರ್ಥಿಗಳ ವ್ಯಾಸಂಗ ಗಮನಿಸಿ ಸರ್ಕಾರ ಶಾಲೆ ಪ್ರಾರಂಭಿಸಿತು. ಹಿಜಾಬ್ ವಿಚಾರದಲ್ಲಿ ತಗಾದೆ ತೆಗೆದರು. ಅದು ಸರಿಯಾಗಲಿಲ್ಲ. ಕೋರ್ಟ್ ಆದೇಶ ಬಂದಾಗ ಅದನ್ನೂ ಸಹಿಸಲಿಲ್ಲ. ಬೊಮ್ಮಾಯಿ ಸರ್ಕಾರದ ಕೆಲಸಗಳನ್ನು ಸಹಿಸದೇ ವಿರೋಧ ಪಕ್ಷದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಆಗುತ್ತಿದೆ. 27 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಸಹಿಸೋಕೆ ವಿರೋಧ ಪಕ್ಷಕ್ಕೆ ಆಗುತ್ತಿಲ್ಲ. 7000 ಶಾಲಾ ಕಟ್ಟಡ ನಿರ್ಮಾಣ ಮಾಡಿದರು. ಕಲಿಕಾ ಚೇತರಿಕೆ ಹಮ್ಮಿಕೊಂಡೆವು. ಇವನ್ನು ಸಹಿಸಲು ವಿರೋಧ ಪಕ್ಷಕ್ಕೆ ಆಗುತ್ತಿಲ್ಲ. ಹೀಗಾಗಿ ನಾನಾ ತಗಾದೆ ಎತ್ತುತ್ತಿದ್ದಾರೆ.

ಪಠ್ಯ ಪುಸ್ತಕ ವಿಚಾರಕ್ಕೆ ಬಂದರೆ, ಟಿಪ್ಪು ಸುಲ್ತಾನ್ ಪಠ್ಯ ತೆಗೆಸಿದ್ದಾರೆ, ಭಗತ್ ಸಿಂಗ್ ಪಠ್ಯ ಬಿಟ್ಟಿದ್ದಾರೆ ಎಂದು ಹಬ್ಬಿಸಿದರು. ಶಿಕ್ಷಣ ಸಚಿವನಾಗಿ ನಾನು ಸ್ಪಷ್ಟನೆ ನೀಡಿದ್ದರೂ ಸುಳ್ಳು ಪ್ರಚಾರ ಮಾಡಿದರು. ಬಸವಣ್ಣ, ನಾರಾಯಣ ಗುರು, ಪಠ್ಯ ತೆಗೆಸಿದರು ಎಂದು ಹಬ್ಬಿಸಿದರು. ಈಗ ಕುವೆಂಪು ಪಠ್ಯ ಕುರಿತ ಗೊಂದಲ ಸೃಷ್ಠಿಸಿ ಜಾತಿ ವಿಚಾರ ಎಳೆದು ತರುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿ ಕಾರಿದ್ದಾರೆ.

ಟಿಪ್ಪು ಸುಲ್ತಾನ್ ಮತಾಂತರ ಮಾಡ್ತಿದ್ದ. ಬಲವಂತವಾಗಿ ಟಿಪ್ಪು ಸುಲ್ತಾನ್ ಮತಾಂತರ ಮಾಡುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. ಕೊಡಗು, ಮೈಸೂರು, ಮತಾಂತರ ಮಾಡಿದ್ದವ ಟಿಪ್ಪು ಮಾಡಿದ್ದು ಸತ್ಯ.. ಅವರ ಬಗ್ಗೆ ನಿಜ ಬರೆಯಬೇಕಿತ್ತು. ಬ್ರಿಟಿಷರ ವಿರುದ್ದ ಹೋರಾಡಿದ್ದ ಕುರಿತು 10ನೇ ತರಗತಿ, ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ, ಮದಕರಿ, ಎಲ್ಲರೂ ಬ್ರಿಟೀಷರ ವಿರುದ್ದ ಹೋರಾಡಿದವರೇ ಹಿಂದೂ ಎಂಬ ಕಾರಣಕ್ಕೆ ಅವರನ್ನೆಲ್ಲಾ ಕೈಬಿಟ್ಟು, ಟಿಪ್ಪು ಬಗ್ಗೆ ಮಾತ್ರ ಆರು ಪುಟ ಪಠ್ಯ ಸೇರಿಸಿದ್ದರು. ಬರಗೂರು ರಾಮಚಂದ್ರಪ್ಪರಂತೆ ನಾವು ಕೆಟ್ಟರಾಜಕೀಯ ನಾವು ಮಾಡುವುದಿಲ್ಲ, ಟಿಪ್ಪು ಸುಲ್ತಾನ್ ಪಠ್ಯ ತೆಗೆದಿಲ್ಲ. ಇಂತಹ ಸತ್ಯವನ್ನು ಅಳವಡಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!